Uncategorized

*ಖ್ಯಾತ ನಟಿ ಅನು ಗೌಡ ಮೇಲೆ ಮಾರಣಾಂತಿಕ ಹಲ್ಲೆ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕಿರುತೆರೆ ಹಾಗೂ ಚಲನಚಿತ್ರ ಖ್ಯಾತ ನಟಿ ಅನು ಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ನಡೆದಿದೆ.

ಗಂಭೀರವಾಗಿ ಹಲ್ಲೆಗೊಳಗಾಗಿರುವ ಅನು ಗೌಡ ಸಾಗರ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅನುಗೌಡ ತಂದೆ-ತಾಯಿ ಜೊತೆ ಬೆಂಅಗ್ಳೂರಿನಿಂದ ಕಾಸ್ಪಾಡಿಗೆ ಆಗಮಿಸಿ, ಜಮೀನು ನೋಡಲು ಬಂದಿದ್ದರು. ಆಗಾಗ ಬೆಂಗಳೂರಿನಿಂದ ಸಾಗರಕ್ಕೆ ಜಮೀನು ನೋಡುವ ವಿಚಾರವಾಗಿ ಬರುತ್ತಿದ್ದರು.

Home add -Advt

ಜಮೀನು ವಿಚಾರವಾಗಿ ನೀಲಮ್ಮ ಹಾಗೂ ಮೋಹನ್ ಎಂಬುವವರಿಂದ ಗಲಾಟೆ ನಡೆದು, ಅನುಗೌಡ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಮೋಹನ್ ಹಾಗೂ ಆತನ ತಾಯಿ ನೀಲಮ್ಮ ವಿರುದ್ಧ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Related Articles

Back to top button