VTU Add
Beereshwara 36
LaxmiTai 5

ಕಾರ್ಗಿಲ್ ನಲ್ಲಿ ಭೂಕಂಪನ; ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲು

Anvekar 3

ಪ್ರಗತಿವಾಹಿನಿ ಸುದ್ದಿ, ಶ್ರೀನಗರ: ಕಾರ್ಗಿಲ್​ನಲ್ಲಿ ಇಂದು ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ.

7.30ರ ಸುಮಾರಿಗೆ ಲಡಾಖ್​ನ ಉತ್ತರಕ್ಕೆ 401 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

Emergency Service

ಈ ಹಿಂದೆ ಜೂನ್ 18 ರಂದು 24 ಗಂಟೆಗಳಲ್ಲಿ ಮೂರು ಭೂಕಂಪಗಳು ಲಡಾಕ್‌ನಲ್ಲಿ ಸಂಭವಿಸಿದ್ದವು. ಜೂನ್ 18 ರಂದು ಲಡಾಖ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 279 ಕಿ.ಮೀ. ದೂರದಲ್ಲಿ ಬೆಳಗ್ಗೆ 8.28ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು.

Cancer Hospital 2

ಅದಕ್ಕೂ ಮೊದಲು, ಮುಂಜಾನೆ, ರಿಕ್ಟರ್ ಮಾಪಕದಲ್ಲಿ 4.1 ರ ತೀವ್ರತೆಯ ಭೂಕಂಪವು ಜೂನ್ 18 ರಂದು ಲಡಾಖ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 295 ಕಿ.ಮೀ. ದೂರದಲ್ಲಿ ದಾಖಲಾಗಿತ್ತಿ. ಜೂನ್ 17 ರಂದು, ರಿಕ್ಟರ್ ಮಾಪಕದಲ್ಲಿ 4.5 ರ ತೀವ್ರತೆಯ ಭೂಕಂಪವು ಲಡಾಖ್ ಅನ್ನು ರಾತ್ರಿ 9.44 ಕ್ಕೆ ಸಂಭವಿಸಿತ್ತು

Bottom Add3
Bottom Ad 2