Belagavi NewsBelgaum NewsKannada NewsKarnataka NewsLatest

ಜೈನ ಮುನಿ ಹತ್ಯೆ ಪ್ರಕರಣ: ಎಂಟ್ರಿ ಕೊಟ್ಟ CID, FSL Team

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಸಿಐಡಿ ಮತ್ತು ಎಫ್ಎಸ್ಎಲ್ ತಂಡ ಮಂಗಳವಾರ ಚಿಕ್ಕೋಡಿಗೆ ಆಗಮಿಸಿದೆ.

ಸಿಐಡಿ ಐಜಿಪಿ ಪ್ರವೀಣ್ ಪವಾರ್ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ನಿರ್ದೇಶಕ ಧರ್ಮೇಂದ್ರ ಮೀನಾ ಅವರು ಇಂದು ಚಿಕ್ಕೋಡಿಗೆ ಭೇಟಿ ನೀಡಿ ಹಿರೇಕೋಡಿ ಆಶ್ರಮ, ಮಾವಿನಹೊಂಡ ಮತ್ತು ಖಟಕಭಾವಿ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದರು.

ಎಸ್ಪಿ ಡಾ.ಸಂಜೀವ ಪಾಟೀಲ ಮತ್ತು ಸ್ಥಳೀಯ ಪೊಲೀಸರು ಸಹಕಾರ ನೀಡಿದರು.

ಜೈನ ಮುನಿ ಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button