Latest

ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಆರೋಗ್ಯ ಸಚಿವರ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಗನ್ ಮ್ಯಾನ್ ಹಾಗೂ ಸಚಿವರ ಖಾಸಗಿ ವಾಹನ ಚಾಲಕ ಇಬ್ಬರ ನಡುವೆ ಮಾರಾಮಾರಿ ನಡೆದಿದೆ.

ಬೆಂಗಳೂರಿನ ಸದಾಶಿವನಗರದ ಸಚಿವರ ಮನೆ ಮುಂದೆಯೇ ನಡು ರಸ್ತೆಯಲ್ಲಿ ಡ್ರೈವರ್ ಹಾಗೂ ಗನ್ ಮ್ಯಾನ್ ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಗನ್ ಮ್ಯಾನ್ ತಿಮ್ಮಯ್ಯ, ಚಾಲಕ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದಾನೆ.

Related Articles
Home add -Advt

ನಡು ರಸ್ತೆಯಲ್ಲೇ ಇಬ್ಬರೂ ಕಿತ್ತಾಡಿಕೊಂಡಿದ್ದು, ಅಲ್ಲಿಯೇ ಇದ್ದ ಪೊಲೀಸರು ಹೊಡೆದಾಟ ನಿಲ್ಲಿಸಲು ಹರಸಾಹಸಪಟ್ಟಿದ್ದಾರೆ. ಇಬ್ಬರ ನಡುವಿನ ಮಾರಾಮಾರಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Related Articles

Back to top button