ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆ, ಗುಣಮಟ್ಟ ನಿಯಂತ್ರಣ ಕುರಿತು ಕಾರ್ಯಾಗಾರ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ತಾಂತ್ರಿಕ ಸಿಬ್ಬಂದಿಗಳಿಗೆ ಪಿಎಂಸಿಯ ಇಂಜಿನೀಯರುಗಳಿಗೆ ಮತ್ತು ಗುತ್ತಿಗೆದಾರರು ಮತ್ತು ಅವರ ಇಂಜಿನೀಯರುಗಳಿಗೆ ಹಮ್ಮಿಕೊಂಡ “ಗುಣಮಟ್ಟ ನಿಯಂತ್ರಣ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡರೆ ಸುಸ್ಥಿರತೆ ಸಾಧಿಸಲು ಸಾಧ್ಯವೆಂದು ಬೆಳಗಾವಿ ಸ್ಮಾರ್ಟ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಶಿರೀನ ನದಾಫ್ ಮಾತನಾಡಿದರು.
ಇಂಜಿನೀಯರುಗಳಿಗೆ ಗುಣಮಟ್ಟವನ್ನು ಹೇಗೆ ಕಾಯ್ದುಕೊಳ್ಳಬೇಕೆಂದು ತಿಳಿದುಕೊಳ್ಳುವುದು ಅತೀ ಅವಶ್ಯವಾಗಿದೆ. ಆದ್ದರಿಂದ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಸಂಬಂಧಿಸಿದ ಇಂಜಿನೀಯರುಗಳು ಕಾರ್ಯಸ್ಥಳದಲ್ಲಿದ್ದು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಮತ್ತು ಉತ್ತಮ ಗುಣಮಟ್ಟದ ಕಾಮಗಾರಿಗಳಿಂದ ಸುಸ್ಥಿರತೆ ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಂ.ನಾರಾಯಣ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) ಬೆಳಗಾವಿ ಸ್ಮಾಸ್ಮಾರ್ಟ್ ಸಿಟಿ ರವರು ಮಾತನಾಡಿ ಇಂಜಿನೀಯರುಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವಿಕೆಯ ಪರೀಕ್ಷೆಗಳು, ತಂತ್ರಗಳು ಅದರ ಜ್ಞಾನ ಬಳಕೆಯ ತಂತ್ರಗಳ ಬಗ್ಗೆ ಜ್ಞಾನವಿರುವುದು ಅತಿ ಅವಶ್ಯವೆಂದು ತಿಳಿಸಿದರು.
ನಂತರ ನಡೆದ ಕಾರ್ಯಾಗಾರದಲ್ಲಿ ಎಂ.ನಾರಾಯಣ ರಸ್ತೆಯ ಗುಣಮಟ್ಟ, ಕಾಂಕ್ರೆಟ್‌ನ ಗುಣಮಟ್ಟ, ಕಟ್ಟಡದ ಗುಣಮಟ್ಟ,ಹಾಗೂ ಇತರೆ ಸಿವಿಲ್ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಹೇಗೆ ಪರೀಕ್ಷಿಸಬೇಕೆಂದು ವಿವರಿಸಿದರು.
ವೇದಿಕೆಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಜೀತಕುಮಾರ ಪಾಟೀಲ, ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಅರ್ಚನಾ ಕುಲಕರ್ಣಿ ಉಪಸ್ಥಿತರಿದ್ದರು. ಮತ್ತು ಕಾರ್ಯಾಗಾರದಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ತಾಂತ್ರಿಕ ಶಾಖೆಯ ಎಲ್ಲ ಅಭಿಯಂತರರುಗಳು, ಪಿಎಂಸಿಯ ತಂಡದ ನಾಯಕರು,ಇಂಜಿನೀಯರುಗಳು, ಗುತ್ತಿಗೆದಾರರು ಮತ್ತು ಅವರ ಇಂಜಿನೀಯರುಗಳು ಹಾಜರಿದ್ದರು. ಪ್ರಕಾಶ ಸಿ.ಕೋಷ್ಟಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ