Kannada NewsLatest

ಎದುರಾಳಿ ಹೊಡೆತಕ್ಕೆ ಕಿಡ್ನಿ ಕಳೆದುಕೊಂಡ ಬಾಸ್ಕೆಟ್ ಬಾಲ್ ಆಟಗಾರ

ಪ್ರಗತಿವಾಹಿನಿ ಸುದ್ದಿ, ಮನಿಲಾ(ಫಿಲಿಪ್ಪೀನ್ಸ್‌): ಎದುರಾಳಿ ಆಟಗಾರನ ಹೊಡೆತದಿಂದ ಗಾಯಗೊಂಡ ಸರ್ಬಿಯಾದ ಬಾಸ್ಕೆಟ್‌ಬಾಲ್‌ ಆಟಗಾರರೊಬ್ಬರು ಒಂದು ಕಿಡ್ನಿಯನ್ನೇ ಕಳೆದುಕೊಂಡಿದ್ದಾರೆ.

ದಕ್ಷಿಣ ಸುಡಾನ್‌-ಸರ್ಬಿಯಾ ನಡುವಿನ ವಿಶ್ವಕಪ್‌ ವೇಳೆ ಈ ಘಟನೆ ನಡೆದಿದೆ. ಪಂದ್ಯ ಮುಕ್ತಾಯಕ್ಕೆ 2 ನಿಮಿಷ ಬಾಕಿ ಇರುವಾಗ ಸರ್ಬಿಯಾದ ಬೋರಿಸಾ ಸಿಮಾನಿಕ್‌ರ ಹೊಟ್ಟೆ ಭಾಗಕ್ಕೆ ಸುಡಾನ್‌ನ ನುನಿ ಒಮೊಟ್‌ರ ಕೈ ರಭಸದಿಂದ ತಾಗಿದೆ. ಅಸಹನೀಯ ನೋವಿನಿಂದ ನರಳುತ್ತಿದ್ದ ಸಿಮಾನಿಕ್‌ರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ವೈದ್ಯರು ಒಂದು ಕಿಡ್ನಿ ನಿಷ್ಕ್ರಿಯಗೊಂಡಿದ್ದಾಗಿ ತಿಳಿಸಿದ್ದಾರೆ.

Home add -Advt

ಶಸ್ತ್ರಕ್ರಿಯೆ ಮೂಲಕ ಸಿಮಾನಿಕ್ ಅವರ ನಿಷ್ಕ್ರಿಯಗೊಂಡ ಕಿಡ್ನಿ ಹೊರತೆಗೆದಿದ್ದು, ಅವರು ಚಿಕಿತ್ಸೆಯಲ್ಲಿದ್ದಾರೆ. ಇನ್ನು ಮುಂದೆ ಅವರು ಆಟವಾಡುವ ಸಾಧ್ಯತೆ ಇದೆಯೇ, ಇಲ್ಲವೇ ಎಂಬ ಬಗ್ಗೆ ಅವರ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

Related Articles

Back to top button