ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್ : ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಆದರೆ ಅಧ್ಯಕ್ಷ ಜೊ ಬೈಡನ್ ಅವರಿಗೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂಬ ಮಾಹಿತಿಯನ್ನು ಶ್ವೇತಭವನ ಹೊರಹಾಕಿದೆ.
ಜಗತ್ತು ಕೊರೊನಾ ಮಹಾಮಾರಿಯನ್ನು ಮರೆಯುತ್ತಿರುವ ಸಂದರ್ಭದಲ್ಲಿಯೇ ಪ್ರತಿಷ್ಠಿತ ದೇಶವೊಂದರ ಅಧ್ಯಕ್ಷರ ಪತ್ನಿ ಹಾಗೂ ಪ್ರಥಮ ಮಹಿಳೆಗೆ ಸೋಂಕು ತಗುಲಿರುವುದು ಮತ್ತೊಮ್ಮೆ ತಾನಿನ್ನೂ ಜೀವಂತವೆಂಬುದರ ಎಚ್ಚರಿಕೆಯ ಸಂದೇಶವನ್ನು ರವಾನಿಸಿದಂತಿದೆ.
72 ವರ್ಷದ ಜಿಲ್ ಬೈಡನ್ ಅವರಿಗೆ ಕೋವಿಡ್ ನ ಸೌಮ್ಯ ಲಕ್ಷಣಗಳು ಕಂಡು ಬಂದಿದೆ. ರೆಹೋಬೋತ್ ಬೀಚ್ನಲ್ಲಿರುವ ದಂಪತಿ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಶ್ವೇತಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ ಬೈಡನ್ ಅವರಿಗೆ 2022ರ ಆಗಸ್ಟ್ ನಲ್ಲಿಯೂ ಕೋವಿಡ್ ಲಕ್ಷಣ ಕಾಣಿಸಿಕೊಂಡಿತ್ತು. ಜೊ ಬೈಡನ್ ಅವರಿಗೆ ಸಹ ಕಳೆದ ವರ್ಷ ಜುಲೈ 2022ರಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದನ್ನು ಸ್ಮರಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ