Belagavi NewsBelgaum NewsKannada NewsKarnataka NewsLatestPolitics

*ಬೇಡಿಕೆ ಮಂಡಿಸಿದ ಒಂದೇ ದಿನಕ್ಕೆ ಅನುದಾನ ಹಂಚಿದ ಸಚಿವ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಬೇಡಿಕೆ ಮಂಡಿಸಿದ ಒಂದೇ ದಿನದಲ್ಲಿ ಅನುದಾನ ಹಂಚಿಕೆ ಮಾಡುವ ಮೂಲಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಮ್ಮದು ವಿಭಿನ್ನ ವರ್ಕಿಂಗ್ ಸ್ಟೈಲ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಬೆಂಗಳೂರಿನ ನ್ಯಾಯವಾದಿಗಳ ನಿಯೋಗವು ಸಿವಿಲ್ ಕೋರ್ಟ್ ನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗುರುವಾರ ಮಧ್ಯಾಹ್ನ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ನ್ಯಾಯವಾದಿಗಳ ಮನವಿಗೆ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಜಾರಕಿಹೊಳಿ ಅವರು ಸಂಜೆ ವೇಳೆಗೆ ಈ ಎಲ್ಲಾ ಕಾಮಗಾರಿಗಳ ಬೇಡಿಕೆಗೆ ಅನುದಾನ ಹಂಚಿಕೆ ಮಾಡಿ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದರು.

ನ್ಯಾಯಾಲಯದ ವಿವಿಧ ಕಾಮಗಾರಿಗಳಿಗೆ 2.74 ಕೋಟಿ ಅನುದಾನ ಹಂಚಿಕೆ ಮಾಡಿದ್ದು ಈ ಪೈಕಿ 90 ಲಕ್ಷ ವೆಚ್ಚದಲ್ಲಿ ಕಾರ್ ಪಾರ್ಕಿಂಗ್ ನಿರ್ಮಾಣ, 1 ಕೋಟಿ ವೆಚ್ಚದಲ್ಲಿ ಮಾಡರ್ನ್ ಹೈಟೆಕ್ ಶೌಚಾಲಯ ನಿರ್ಮಾಣ, 59 ಲಕ್ಷ ವೆಚ್ಚದಲ್ಲಿ ಸ್ಕೈ ವಾಕ್, 25 ಲಕ್ಷ ರೂ ವೆಚ್ಚದಲ್ಲಿ ಸುಲಭ ಶೌಚಾಲಯ ನವೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಇನ್ನು ಅನುದಾನ ಹಂಚಿಕೆಯಾದ ಮರುದಿನ ಶುಕ್ರವಾರವೇ ಈ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿದ್ದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ ವರಾಳೆ, ಸಚಿವ ಸತೀಶ್ ಜಾರಕಿಹೊಳಿ, ನ್ಯಾಯಮೂರ್ತಿಗಳಾದ ಜಿ. ನರೇಂದರ, ಪಿ.ಎಸ್ .ದಿನೇಶ್ ಕುಮಾರ್, ಸೋಮಶೇಖರ, ಶಶಿಕಿರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button