Kannada NewsKarnataka NewsLatest

*ಕೋರ್ಟ್ ಗೆ ತೆರಳುತ್ತಿದ್ದ ವಕೀಲನ ಬರ್ಬರ ಹತ್ಯೆ; ಅಟ್ಟಾಡಿಸಿಕೊಂಡು ಬಂದು ಕೊಲೆಗೈದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕೋರ್ಟ್ ಗೆ ತೆರಳುತ್ತಿದ್ದ ವಕೀಲರೊಬ್ಬರನ್ನು ದುಷ್ಕರ್ಮಿಗಳು ಅರ್ಧ ಕಿ.ಮೀ ವರೆ ಅಟ್ಟಾಡಿಸಿಕೊಂಡು ಬಂದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರ್ಗಿ ನಗರದ ಸಾಯಿ ಮಂದಿರ ಬಳಿಯ ಅಪಾರ್ಟ್ ಮೆಂಟ್ ಬಳಿ ನಡೆದಿದೆ.

ಈರಣ್ಣಗೌದ ಪಾಟೀಲ್ ಕೊಲೆಯಾದ ವಕೀಲ. ಈರಣ್ಣಗೌಡ ಪಾಟೀಲ್ ಬೈಕ್ ನಲ್ಲಿ ಕೋರ್ಟ್ ಗೆ ಹೋಗುವ ವೇಳೆ ಇಬ್ಬರು ದುಷ್ಕರ್ಮಿಗಳು ಮಚ್ಚು ಹಿಡಿದು ಬಂದಿದ್ದಾರೆ ಬೈಕ್ ಬಿಟ್ಟು ವಾಪಾಸ್ ಅಪಾರ್ಟ್ ಮೆಂಟ್ ಕಡೆಗೆ ಓಡಿದ ವಕೀಲ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಅತ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

Home add -Advt

ಮಾಸ್ಕ್ ಧರಿಸಿರುವ ದುಷ್ಕರ್ಮಿಗಳು ಮಚ್ಚು ಹಿಡಿದು ಅಟ್ಟಾಡಿಸಿಕೊಂಡು ಬಂದ ಹಾಗೂ ವಕೀಲ ತಪ್ಪಿಸಿಕೊಳ್ಳಲು ಓಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಂತಕರ ಪತ್ತೆಗೆ ಎರಡು ಪೊಲೀಸ್ ತಂಡ ರಚನೆ ಮಾಡಲಾಗಿದ್ದು, ಸ್ಥಳದಲ್ಲಿ ಸಿಕ್ಕ ಕೆಲ ಮಾಹಿತಿ ಮೇರೆಗೆ ಶೋಧಕಾರ್ಯ ನಡೆಸಲಾಗಿದೆ ಎಂದು ಕಲಬುರ್ಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ತಿಳಿಸಿದ್ದಾರೆ.


Related Articles

Back to top button