Belagavi NewsBelgaum NewsKannada NewsKarnataka News

ಖಾನಾಪುರ ಎಸಿಎಫ್ ಆಗಿ ಸುನೀತಾ ನಿಂಬರಗಿ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಯಬಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಸುನೀತಾ ನಿಂಬರಗಿ ಅವರನ್ನು ಖಾನಾಪುರ ಪ್ರಾದೇಶಿಕ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಖಾನಾಪುರ ಎಸಿಎಫ್ ಆಗಿದ್ದ ಗುರುದತ್ತ ಕಮಲಾಕರ ಶೇಟ್ ಅವರು ದಾಂಡೇಲಿ ಮರಮುಟ್ಟುಗಳ ಸಂಗ್ರಹಾಲಯದ ಎಸಿಎಫ್ ಆಗಿ ವರ್ಗಾವಣೆಗೊಂಡಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಸುನೀತಾ ನಿಂಬರಗಿ ಅವರನ್ನು ನೇಮಿಸಲಾಗಿದೆ.

Home add -Advt

ಸುನೀತಾ ನಿಂಬರಗಿ ಅತ್ಯಂತ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದು, ಕಳೆದ ಸುಮಾರು 25 ವರ್ಷಗಳಿಂತ ಹೆಚ್ಚಿನ ಅವಧಿಯಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2020ರಲ್ಲಿ ಅವರಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಗಿದೆ.

Related Articles

Back to top button