Karnataka NewsLatestPolitics

*ವಿಧಾನಸಭೆ ಕಲಾಪದಲ್ಲಿ ತಾರತಮ್ಯ: ಸ್ಪೀಕರ್ ಗೆ ಪತ್ರ ಬರೆದ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ವಿಧಾನಸಭೆಯ ಕಾರ್ಯಕಲಾಪದಲ್ಲಿ ತಾರತಮ್ಯ ನಡೆಸಲಾಗುತ್ತಿದೆ. ವಿಪಕ್ಷ ನಾಯಕರು ಮತ್ತು ವಿಪಕ್ಷ ಶಾಸಕರ ಹೇಳಿಕೆಗಳ ಫೋಟೋ, ವೀಡಿಯೋಗಳನ್ನು ಮಾಧ್ಯಮಗಳಿಗೆ ವಾರ್ತಾ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್​. ಅಶೋಕ್​​ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ವಾರ್ತಾ ಇಲಾಖೆಗೆ ನಿರ್ದೇಶನ ನೀಡಿ. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸೋದಾಗಿ ಉಲ್ಲೇಖಿಸಿ ವಿಧಾನಸಭೆ ಸ್ಪೀಕರ್​​​ಗೆ ಪತ್ರ ಬರೆದಿದ್ದಾರೆ.

Home add -Advt

ಆಗಸ್ಟ್​​ 13ರಿಂದ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಶಾಸಕರು ನೀಡುವ ಹೇಳಿಕೆಗಳು, ಭಾಷಣಗಳು ಹಾಗೂ ಧ್ವನಿ-ದೃಶ್ಯ/ವೀಡಿಯೋಗಳು ಮುದ್ರಣ ಹಾಗೂ ಟಿವಿ ಮಾಧ್ಯಮಗಳಲ್ಲಿ ಸಮರ್ಪಕವಾಗಿ ಪ್ರಸಾರವಾಗುತ್ತಿಲ್ಲ. ಮುಖ್ಯಮಂತ್ರಿಗಳು, ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರ ಹೇಳಿಕೆಗಳಿಗೆ ಹೆಚ್ಚಿನ ಪ್ರಚಾರ ದೊರೆಯುತ್ತಿದೆ . ಆ ಮೂಲಕ ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ತಾರತಮ್ಯ ನಡೆಯುತ್ತಿದೆ. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಈ ರೀತಿಯ ತಾರತಮ್ಯವು ಹಿಂದೆಂದು ನಡೆದಿರುವುದಿಲ್ಲ ಎಂದವರು ಆರೋಪಿಸಿದ್ದಾರೆ.

ತಾವು ಕೂಡಲೇ ಸಂಬಂಧಿಸಿದ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ, ಈ ತಾರತಮ್ಯವನ್ನು ಸರಿಪಡಿಸಲು ಕೋರುತ್ತೇನೆ. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಸ್ಪೀಕರ್ ಜಿ.ಎಸ್. ಪಾಟೀಲ್​​ಗೆ ಬರೆದ ಪತ್ರದಲ್ಲಿ ಆರ್. ಅಶೋಕ್ ತಿಳಿಸಿದ್ದಾರೆ.


Related Articles

Back to top button