Breaking News… ಬೆಳಗಾವಿ: ಅಧಿಕಾರಿ ಮನೆಯಿಂದ 27 ಲಕ್ಷ ರೂ. ವಶ
೨೭ ಲಕ್ಷ ನಗದು ಹಣ ವಶ: ಪಂಚಯಾತ್ ರಾಜ್ ಅಭಿಯಂತರ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಖಾನಾಪುರ ಉಪವಿಭಾಗದ ಪಂಚಯಾತ್ ರಾಜ್ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿರುವ ದುರದುಂಡೇಶ್ವರ ಬನ್ನೂರ ಅವರನ್ನು ಮಾ.೨೬ ರಂದು ಲೋಕಾಯುಕ್ತರು ಬಂಧಿಸಿದ್ದಾರೆ.
ಪಂಚಾಯತ ರಾಜ್ ಇಂಜೀನಿಯರಿಂಗ್ ಉಪವಿಭಾಗ, ಖಾನಾಪೂರ ರವರು ನರೇಗಾ ಕಾಮಗಾರಿಗಳಿಗೆ ತಾಂತ್ರಿಕ ಅನುಮೋಧನೆ ನೀಡಲು ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯಾದ ದುರದುಂಡೇಶ್ವರ ಬನ್ನೂರ ಅವರನ್ನು ಮಾ. ೨೬ ರಂದು ಟ್ರ್ಯಾಫ್ ಮಾಡಿ ಬಂಧಿಸುವಲಿ ಯಶಸ್ವಿಯಾಗಿದ್ದಾರೆ.
ಅಧಿಕಾರಿ ವಾಸವಿರುವ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿನ ಅವರ ಮನೆ ಮೇಲೆ ದಾಳಿ ಮಾಡಿ ಶೋಧನೆ ಕೈಕೊಂಡ ಕಾಲಕ್ಕೆ ಲೆಕ್ಕವಿಲ್ಲದ ಒಟ್ಟು ರೂ. 27,75,000 ನಗದು ಹಣ ಮತ್ತು ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿದ್ದು, ನಗದು ಹಣವನ್ನು ಮುಂದಿನ ತನಿಖೆ ಕುರಿತು ಜಪ್ತಿ ಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.
ಸದರಿ ಶೋಧನೆಯನ್ನು ಎಸ್.ಪಿ. ಹನಮಂತರಾಯ್, ಕಲೋ ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ, ಪುಷ್ಪಲತಾ, ನಿರಂಜನ್ ಪಾಟೀಲ, ಪಿಐ, ಸಿಬ್ಬಂದಿಗಳಾದ ರವಿ ಮಾವರಕರ, ರಾಜಶ್ರೀ ಭೋಸಲೆ, ಅಭಿಜಿತ ಜಮಖಂಡಿ ಮತ್ತು ಎನ್.ಎಂ.ಮಠದ ತಂಡದವರಿಂದ ಕೈಗೊಳ್ಳಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ