Belagavi NewsBelgaum NewsKannada NewsKarnataka NewsPolitics

ಅಕ್ರಮ ಗೋವುಗಳ ಸಾಗಾಟ ಆರೋಪ: 50ಕ್ಕೂ ಹೆಚ್ಚು ಜನರ ದಾಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಅಕ್ರಮವಾಗಿ ಗೋವುಗಳ‌ನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಲಾರಿಯನ್ನು ತಡೆದಿರುವ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಚಾಲಕ ಮತ್ತು ಕ್ಲಿನರನನ್ನು ಥಳಿಸಿದ್ದಾರೆ.

ಬೆಳಗಾವಿಯ ಹೊರವಲಯದ ಸುವರ್ಣ ವಿಧಾನಸೌಧದ ಮುಂದೆ ಲಾರಿ ತಡೆದಿರುವ 50 ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ತಡೆದು ಚಾಲಕನ ಮೇಲೆ ಹಾಗೂ ಕ್ಲಿನರ್ ಮೇಲೆ ಹಲ್ಲೆ ಮಾಡಿದ್ದಾರೆ.‌ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.‌ ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲಿನರಗೆ ಗಂಭೀರ ಗಾಯಗಳಾಗಿದ್ದು, ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.‌

Home add -Advt

ಮಹಾರಾಷ್ಟ್ರದಿಂದ ಬೆಳಗಾವಿ – ಹುಬ್ಬಳ್ಳಿ ಮಾರ್ಗವಾಗಿ ಗೋವುಗಳನ್ನು ಸಾಗಿಸಲಾಗುತಿತ್ತು ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿದ್ದಾರೆ.‌

Related Articles

Back to top button