Latest

*ಹೆತ್ತ ಮಗುವನ್ನೇ ಮೊಸಳೆಗಳ ನಾಲೆಗೆ ಬಿಸಾಕಿದ ತಾಯಿ*

ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿಯ ಕ್ಷುಲ್ಲಕ ಜಗಳಕ್ಕೆ 6 ವರ್ಷದ ಮಗು ಬಲಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿ ಗ್ರಾಮದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಪತಿ ರವಿಕುಮಾರ್ ಹಾಗೂ ಪತ್ನಿ ಸಾವಿತ್ರಿ ನಡುವೆ ಜಗಳ ನಡೆದಿದೆ. ಜಗಳದಿಂದ ಕೋಪಗೊಂಡ ಸಾವಿತ್ರಿ ಹೆತ್ತ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಬಿಸಾಕಿದ್ದಾಳೆ.

6 ವರ್ಷದ ಬಾಲಕ ವಿನೋದ್ ಮೊಸಳೆಗಳ ಬಾಯಿಗೆ ಬಲಿಯಾಗಿದ್ದಾನೆ. ಮಗನನ್ನು ಬಿಸಾಕಿದ ಬಳಿಕ ತಾಯಿಗೆ ತನ್ನ ದುಡುಕಿನ ಅರಿವಾಗಿದೆ. ಆದರೆ ಮಗ ಪ್ರಾಣಾಬಿಟ್ಟಿದ್ದಾನೆ.

Home add -Advt

ಮುಳುಗು ತಜ್ಞರು ನಾಲೆಯಲ್ಲಿದ್ದ ಬಾಲಕನ ಮೃತದೇಹವನ್ನು ಹೊರತೆಗಿದ್ದಾರೆ. ಮೊಸಳೆಗಳು ಬಾಲಕನ ಕೈ ತಿಂದಿರುವ ಸ್ಥಿತಿಯಲ್ಲಿ ಶವಪತ್ತೆಯಾಗಿದೆ. ದಾಂಡೇಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರವಿಕುಮಾರ್ ಹಾಗೂ ಪತ್ನಿ ಸಾವಿತ್ರಿಯನ್ನು ಬಂಧಿಸಿದ್ದಾರೆ.

Related Articles

Back to top button