*ಅರುಣಾಚಲ ಪ್ರದೇಶದ ಸಿಎಂ ಆಗಿ ಪೆಮಾ ಖಂಡು ಪ್ರಮಾಣ ವಚನ ಸ್ವೀಕಾರ*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗಳ ಜೊತೆ ನಡೆದ ಚುನಾವಣೆಯಲ್ಲಿ ಅರುಣಾಚಲ ಪ್ರದೇಶದಲ್ಲೂ ಬಿಜೆಪಿ ತನ್ನ ಅಧಿಕಾರ ಸ್ಥಾಪಿಸಿದೆ. ಅರುಣಾಚಲ ಪ್ರದೇಶದ ಸಿಎಂ ಆಗಿ ಮೂರನೇ ಬಾರಿಗೆ ಪೆಮಾ ಖಂಡು ಪ್ರಮಾಣ ವಚನ ಸ್ವೀಕರಿಸಿದರು.
ಇಟಾನಗರದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ. ನಡ್ಡಾ ಕಿರಣ್ ರಿಜಿಜು ಅಲ್ಲದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾಸ್ ಶರ್ಮಾ ಉಪಸ್ಥಿತರಿದ್ದರು.
2016 ರಲ್ಲಿ ಮುಖ್ಯಮಂತ್ರಿಯಾಗಿದ್ದ ಪೆಮಾ ಖಂಡು ಈಗ ಮೂರನೇ ಬಾರಿ ಸಿಎಂ ಆಗಿದ್ದಾರೆ. ಅರುಣಾಚಲ ಪ್ರದೇಶದ 60 ಕ್ಷೇತ್ರಗಳಲ್ಲಿ 46 ಸ್ಥಾನವನ್ನು ಬಿಜೆಪಿ ಗೆದ್ದು ಬೀಗಿದೆ. ನಿನ್ನೆ ಎನ್‌ಡಿಎ ಬೆಂಬಲಿತ ಚಂದ್ರ ಬಾಬು ನಾಯ್ಡು ಅವರ ಟಿಡಿಪಿ ಮತ್ತು ಜನ ಸೇನಾ ಪಾರ್ಟಿಯ ಪವನ್ ಕಲ್ಯಾಣ್ ಕ್ರಮವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಂತರ ಒಡಿಶಾದಲ್ಲಿ ಮಾಝಿ ಪ್ರಮಾಣ ವಚನ ಸ್ವೀಕರಿಸದ್ದು ಈಗ ಅರುಣಾಚಲ ಪ್ರದೇಶದಲ್ಲಿ ಸಿಎಂ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ