Kannada NewsKarnataka News

ಹನುಮಂತ ಬೆಳಗಲಿಗೆ ರಾಜ್ಯ ಮಟ್ಟದ ಉತ್ತಮ ನಲಿಕಲಿ ಶಿಕ್ಷಕ ಪ್ರಶಸ್ತಿ

ಹನುಮಂತ ಬೆಳಗಲಿಗೆ ರಾಜ್ಯ ಮಟ್ಟದ ಉತ್ತಮ ನಲಿಕಲಿ ಶಿಕ್ಷಕ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಶಿಕ್ಷಣ ಇಲಾಖೆಯಲ್ಲಿ ಸತತ 22 ವರ್ಷಗಳ ಸಾರ್ಥಕ ಸೇವೆಯ ಫಲವಾಗಿ ಧರ್ಮಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹನಮಂತ ನಿಂಗಪ್ಪ ಬೆಳಗಲಿಯವರಿಗೆ ರಾಜ್ಯ ಮಟ್ಟದ ಉತ್ತಮ ನಲಿಕಲಿ ಶಿಕ್ಷಕ ಪ್ರಶಸ್ತಿ ದೊರಕಿದೆ.
  ಸದಾ ಕಾಲ ಇಲಾಖೆಯ ಆಶೋತ್ತರಗಳಿಗೆ ಸ್ಪಂದನೆ ನೀಡುವ ಧರ್ಮಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಹನಮಂತ ಬೆಳಗಲಿ, ಸಮೂಹ, ಕ್ಷೇತ್ರ , ರಾಜ್ಯ ಮಟ್ಟದ ಉತ್ತಮ ನಲಿಕಲಿ ಸಂಪನ್ಮೂಲ ವ್ಯಕ್ತಿಯಾಗಿ ಸಮರ್ಥವಾಗಿ ನಲಿಕಲಿ ವರ್ಗ ಕೋಣೆಯನ್ನು ನಿರ್ವಹಿಸುವ ಬಗೆಯ ಕುರಿತು ಶಿಕ್ಷಕ ಸಮುದಾಯಕ್ಕೆ ತಿಳಿಸುವ ಜಾಣ್ಮೆಯುಳ್ಳವರಾಗಿದ್ದಾರೆ.
 ಪರಿಚಯ: ಮೂಲತಃ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ 5-2-1968 ರಲ್ಲಿ ಜನಿಸಿ, ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಹುಟ್ಟೂರಲ್ಲಿ ಪೂರೈಸಿದರು. ಪಿಯುಸಿ ಹಾಗೂ ವೃತ್ತಿ ಶಿಕ್ಷಣ ಐಟಿಸಿಯನ್ನು ಎಸ್.ಎಸ್.ಆರ್ ಕಾಲೇಜಿನಲ್ಲಿ ಮುಗಿಸಿ ವೃತ್ತಿ ಸೇವೆಯನ್ನು 24-10-1997 ರಲ್ಲಿ ಸವದತ್ತಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಿದರು. 1999 ರಲ್ಲಿ ಮೂಡಲಗಿ ವಲಯದ ಬೀರನಗಡ್ಡಿಯ ಮರಡಿಸಿದ್ಧೇಶ್ವರ ತೋಟದ ಶಾಲೆಗೆ ವರ್ಗಾವಣೆಗೊಂಡು 2009 ರವರೆಗೆ ಕಾರ್ಯನಿರ್ವಹಿಸಿದರು. ಸಧ್ಯ ಧರ್ಮಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿಕಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಸಂಪನ್ಮೂಲತೆ: ಮೊದಲಿನಿಂದಲೂ ಮಕ್ಕಳಲ್ಲಿ ಮಕ್ಕಳಾಗಿ ಬೆರೆಯುವ ಗುಣವುಳ್ಳ, ಮಗುವಿನ ಸಾಮರ್ಥ್ಯಾನುಸಾರ ಫಲದಾಯಕ ಬೋಧನಾ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇವರ ಕಲಿಕಾ ಪ್ರಕ್ರಿಯೆಗಳನ್ನು ನೋಡಿ ಶಿಕ್ಷಣ ಇಲಾಖೆ ಇವರನ್ನು ಉತ್ತಮ ನಲಿಕಲಿ ಸಂಪನ್ಮೂಲ ಶಿಕ್ಷಕರನ್ನಾಗಿ ಗುರುತಿಸಿದೆ.
2017-18 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ನಲಿಕಲಿ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಯಾಗಿದ್ದಾರೆ. 2019-20 ರಲ್ಲಿ ಜಿಲ್ಲಾಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ವಿವಿಧ ತಾಲೂಕಿನ ನಲಿಕಲಿ ಶಿಕ್ಷಕರಿಗೆ ಬೋಧನೆ ಹಾಗೂ ನಾವಿಣ್ಯತೆಯ ಅರ್ಥಪೂರ್ಣವಾಗಿ ತರಗತಿ ನಿರ್ವವಹಿಸುವ ಕೌಶಲ್ಯಗಳನ್ನು ತಿಳಿಸಿ ಕೊಡುವ ಕಾರ್ಯ ಮಾಡಿದ್ದಾರೆ. ಮನುಷ್ಯರನ್ನು ಏಕೆ ಶಿಕ್ಷಿತರನ್ನಾಗಿಸಬೇಕು? ಎಂಬ ವಿಷಯದ ಸಂಪನ್ಮೂಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
 ಪ್ರಶಸ್ತಿಯ ಗರಿ: 2016-17ರಲ್ಲಿ ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ಧರ್ಮಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 270 ವಿದ್ಯಾರ್ಥಿಗಳಲ್ಲಿ ನಲಿಕಲಿಯ ಎರಡು ಘಟಕಗಳಿದ್ದು 100 ಮಕ್ಕಳು ನಲಿಕಲಿ ಮಕ್ಕಳಾಗಿದ್ದಾರೆ. ಸಾರ್ಥಕ ಸತತ 22 ವರ್ಷಗಳ ಇಲಾಖೆಯಲ್ಲಿ ಸೇವೆ ಸಲ್ಲಿಸಿದರ ಫಲವಾಗಿ ಪ್ರಸ್ತುತ ವರ್ಷದ ರಾಜ್ಯಮಟ್ಟದ ಉತ್ತಮ ನಲಿಕಲಿ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button