Latest

*ಕುಸಿದುಬಿದ್ದ ಮನೆ ಗೋಡೆ: ಮಕ್ಕಳು ಸೇರಿ ನಾಲ್ವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ತಡ ರಾತ್ರಿಯಿಂದ ಸುರಿಯುತ್ತಿರುವ ವರುಣಾರ್ಭಟಕ್ಕೆ ಮನೆ ಗೋಡೆ ಕುಸಿದುಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ಎಂಬಲ್ಲಿ ನಡೆದಿದೆ.

ಯಾಸಿರ್, ಮರಿಯಮ್ಮ, ರಿಯಾನ ಹಾಗೂ ರಿಫಾನ ಮೃತ ದುರ್ದೈವಿಗಳು. ದಂಪತಿ ಹಾಗೂ ಇಬ್ಬರು ಮಕ್ಕಳು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಬೂಬಕ್ಕರ್ ಎಂಬುವವರ ಮನೆ ಪಕ್ಕದ ಮನೆ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ.

ಈಗಾಗಲೇ ಮೂವರ ಮೃತ ದೆಹ ಪತ್ತೆಯಾಗಿದ್ದು, ಬಾಲಕಿ ರಿಫಾನಾ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button