National

*ನದಿಯಂತಾದ ರಸ್ತೆಗಳು: ಈಜಿ ದಡ ಸೇರಿದ ಪ್ರಯಾಣಿಕರು*

ಪ್ರಗತಿವಾಹಿನಿ ಸುದ್ದಿ: ಉಷ್ಣ ಹವಾದಿಂದ ತತ್ತರಿಸಿದ್ದ ದೆಹಲಿ ಈಗ ಮಳೆಯಿಂದ ನಡುಗುತ್ತಿದೆ. ಸುರಿಯುತ್ತಿರುವ ಮಳೆಯಿಂದಾಗಿ ದೆಹಲಿ ನೀರು ಪಾಲಾಗಿದೆ. 

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ದೆಹಲಿಯ ಅಜಾದ್ ನಗರದ ಅಂಡರ್ ಪಾಸ್‌ನಲ್ಲಿ ಬಸ್‌ ಸಿಕ್ಕಿಹಾಕಿಕೊಂಡಿದ್ದು ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಯಿತು.

ಅಂಡರ್‌ಪಾಸ್‌ನಲ್ಲಿ ಬಸ್‌ ಅರ್ಧ ಮುಳುಗುವಷ್ಟು ನೀರು ನಿಂತಿದೆ. ಅದರಲ್ಲೇ ಬಸ್‌ ಮುಂದೆ ಸಾಗಿಸುವಾಗ ಕೆಟ್ಟು ನಿಂತಿದೆ. ಅದರಲ್ಲಿದ್ದ ಪ್ರಯಾಣಿಕರನ್ನು ಲೈಫ್ ಜಾಕೆಟ್ ಬಳಸಿ ನೀರಿನಿಂದ ತರಲಾಗುತ್ತಿದೆ. ಬಸ್‌ನಿಂದ ಹಗ್ಗ ಕಟ್ಟಿ ಟ್ಯೂಬ್‌ ಮೇಲೆ ಪ್ರಯಾಣಿಕರನ್ನು ಇರಿಸಿ ಹಗ್ಗದ ಸಹಾಯದಿಂದ ಅವರನ್ನು ಹೊರ ತರಲಾಗುತ್ತಿದೆ.

ಮಳೆಯ ಈ ರಾದ್ಧಾಂತ ಜನರನ್ನು ಹೈರಾಣಾಗಿಸಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಅವರು ಏನೂ ಕೆಲಸ ಮಾಡುವುದಿಲ್ಲ. ಬದಲಾಗಿ ಕ್ರೆಡಿಟ್‌ ಮಾತ್ರ ತೆಗೆದುಕೊಳ್ಳುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಹಾದಿ ಬೀದಿಯಲ್ಲಿ ಬಡವರಿಗಾಗಿ ಈಜುಕೊಳ ನಿರ್ಮಿಸಿಕೊಟ್ಟಿದ್ದೇ ಆಪ್‌ ಸರ್ಕಾರದ ಪ್ರಮುಖ ಸಾಧನೆ ಎಂದು ಕೆಲವರು ಕಮೆಂಟಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button