Kannada NewsKarnataka News

ಸತ್ತಿ ಗ್ರಾಮ ಭಾವೈಕ್ಯತೆಯ ಸಂಗಮ

ಸತ್ತಿ ಗ್ರಾಮ ಭಾವೈಕ್ಯತೆಯ ಸಂಗಮ

ಪ್ರಗತಿವಾಹಿನಿ ಸುದ್ದಿ, ನಂದೇಶ್ವರ (ಅಥಣಿ) –
ಸತ್ತಿ ಗ್ರಾಮ ಭಾವೈಕ್ಯತೆಯ ಸಂಗಮವಾಗಿದೆ. ಈ ಗ್ರಾಮದ ಹೆಮ್ಮೆಯ ಮೊಮ್ಮಗ ಹಾಗೂ ನಮ್ಮ ತಂದೆಯವರಾದ ಲಕ್ಷ್ಮಣ ಸವದಿ ಅವರು ಈ ರಾಜ್ಯದ ಉಪ ಮುಖ್ಯಮಂತ್ರಿ ಆಗಿರುವುದು ಸತ್ತಿ ಗ್ರಾಮದ ಕೀರ್ತಿ ಹೆಚ್ಚಿಸಿದೆ. ಗ್ರಾಮೀಣ ಕ್ರೀಡೆಗಳಿಗೆ ನಮ್ಮ ತಂದೆಯವರ  ಪ್ರೋತ್ಸಾಹ ನಿರಂತರವಾಗಿದೆ. ಕ್ರೀಡೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಉಪಮುಖ್ಯಮಂತ್ರಿಗಳು ಹೇಳಿದ್ದಾರೆಂದು ಚಿಕ್ಕೋಡಿ ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಶ್ರೀ ಬುರಾನಸಾಹೇಬರ ಉರಸ ಅಂಗವಾಗಿ ಶುಕ್ರವಾರ ಸಂಜೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಾ  ಪ್ರವಾಹ ಬಂದು ಹೋದರೂ ಗ್ರಾಮದ ಜನರ ಕ್ರೀಡಾ ಪ್ರೀತಿ ಅಭಿಮಾನ ಕಡಿಮೆಯಾಗಿಲ್ಲ, ಈ ಗ್ರಾಮ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳಸಲಿ ಎಂದು ಹೇಳಿದರು.
 ಬಬಲಾದಿ ಮಠದ ಶ್ರೀ ಷಣ್ಮುಖಯ್ಯ  ಸ್ವಾಮಿಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.  ಜಿ.ಪಂ.ಸದಸ್ಯ ಶ್ರೀಶೈಲ ಗಸ್ತಿ, ತಾ.ಪಂ‌ ಸದಸ್ಯ ಜಡೆಪ್ಪ ಕುಂಬಾರ,  ಪರಪ್ಪ ಚಮಕೇರಿ, ಬಾಹುಸಾಬ ಗಾಯಕವಾಡ,  ಅಸ್ಕರ ಅತ್ತಾರ, ಸಂಜೀವ ಗಡ್ಯಾಗೋಳ, ಅನಂತಕುಮಾರ ಪಾಟೀಲ, ಮೊಹನ್ ದೊಡ್ಡಮನಿ, ಬುರಾನ್ ಜಮಲಬಾಯಿ, ಬಸಪ್ಪ ಮುಡಸಿ, ಸತ್ಯಪ್ಪ ಮಳಲಿ, ಸಂಜೀವ ನಾವಿ, ಮುದಕಪ್ಪ ನಂದೇಶ್ವರ, ಶ್ರೀಶೈಲ ಜಕ್ಕಪ್ಪನವರ, ಮಲ್ಲಪ್ಪ ಹಂಚಿನಾಳ, ಪ್ರಶಾಂತ ಅಕ್ಕೊಳ, ಪ್ರದೀಪ್ ನಂದಗಾಂವ,    ಹಣಮಂತ ಲಿಂಗರೆಡ್ಡಿ, ಬಸವರಾಜ ಭಜರಂಗಿ, ನೌಶಾದ ಪಾಟೀಲ, ಡಾ.ಬಿ.ಎಸ್. ಅಜ್ಜನಗಿ, ಬಸಪ್ಪ ತಮದಡ್ಡಿ, ಬುರಾನಸಾಹೇಬರ ಜಾತ್ರಾ ಕಮೀಟಿ ಹಿರಿಯರು, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button