Uncategorized

*ಬೆಂಗಳೂರು ಹುಡುಗಿ- ಬೆಳಗಾವಿ ಹುಡುಗನ ಲವ್ ಮ್ಯಾರೇಜ್ ಗೆ ಬಿಗ್ ಟ್ವಿಸ್ಟ್; ಸಾಚಾ ಅಲ್ಲಾ ಆ ಹುಡುಗಿ; ಹುಡುಗರೇ ಹುಷಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರು ಮೂಲದ ಪ್ರಿಯಾಂಕಾ ಗೌಡ, ಬೆಳಗಾವಿಯ ರೋಹೀತ್ ಕೋಲಕಾರ ಇಬ್ಬರು ಇನ್ಸ್ಟಾ ಗ್ರಾಮ್ ನಲ್ಲಿ ಲವ್ ಮಾಡಿ ನಿನ್ನೆ ಅಷ್ಟೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಈ ಜೋಡಿ ರಕ್ಷಣೆ ನೀಡುವಂತೆ ಬೆಳಗಾವಿ ಎಸ್ ಪಿ ಅವರಿಗೆ ಮನವಿ ಮಾಡಿಕೊಂಡದ್ದು, ಆದರೆ ಇವರ ಮದುವೆಗೆ ಈಗ ದೊಡ್ಡ ಟ್ವಸ್ಟ್ ಸಿಕ್ಕಿದೆ.

ಬೆಂಗಳೂರಿನ ಪ್ರೀಯಾಂಕಾ ಗೌಡ ಹಾಗೂ ಬೆಳಗಾವಿ ಮೂಲದ ರಾಹುಲ್ ಕೊಲಕಾರ್ ಮದುವೆ ಸುದ್ದಿ ನಿನ್ನೆ ವೈರಲ್ ಆಗಿತ್ತು. ಆದರೆ ಸಧ್ಯ ಈ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ನಿನ್ನೆ ಮದುವೆಯಾದ ಬೆಂಗಳೂರಿನ ಪ್ರಿಯಾಂಕಾ ಗೌಡ, ಪ್ರೀತಿ ಪ್ರೇಮದ ಹೆಸರಿನಲ್ಲಿ ಬೆಳಗಾವಿ ಹುಡುಗ ರೋಹಿತ್ ಗೆ ಮೋಸ ಮಾಡಿದಳಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಯಾಕಂದ್ರೆ ಇದೇ ಪ್ರೀಯಾಂಕಾ ಗೌಡ ಬೆಂಗಳೂರಿನ ಪೊಲೀಸರಿಗೆ ನಾನು ವೈಫ್ ಆಫ್ ಸುಧಾಕರ್ ಎಂದು ಬರೆದುಕೊಟ್ಟ ಹೇಳಿಕೆ ಪತ್ರ ಈಗ ಬೆಳಗಾವಿ ಎಸ್ ಪಿ ಕಚೇರಿಗೆ ತಲುಪಿದೆ. ನಿನ್ನೆ ಬೆಳಗಾವಿಯ ರೋಹಿತ್ ಜೊತೆ ಮದುವೆಯಾಗಿರುವ ಪ್ರಿಯಾಂಕಾ ಗೌಡ ಮೊದಲು ಸುಧಾಕರ್ ಎಂಬಾತನ ಜೊತೆ ಮದವೆಯಾಗಿದ್ದಳು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದ್ದು, ಸ್ವತಃ ಪ್ರಿಯಾಂಕಾ ಗೌಡ ಬರೆದು ಕೊಟ್ಟ ಪತ್ರದಲ್ಲಿ ನಾನು ವೈಫ್ ಆಫ್ ಸುಧಾಕರ್ ಎಂದು ಬರೆದಿದ್ದಾಳೆ.

ಮೂಲಗಳ ಪ್ರಕಾರ ಪ್ರಿಯಾಂಕಾ ಸುಧಾಕರನನ್ನು ಮದುವೆ ಆಗುವ ಮೋದಲು ಬೇರೆ ಯುವಕನ ಜೊತೆಯೂ ಮದುವೆ ಆಗಿದ್ದಾಳೆ.‌ ಆತ ಸರಿಯಾಗಿ ನೋಡಿಕೊಳ್ಳದೆ ಇರುವಾಗ ಸುಧಾಕರ ಜೊತೆ ಮದುವೆ ಆಗಿದ್ದಾಳೆ. ಒಂದು ತಿಂಗಳ ಹಿಂದಷ್ಟೆ ಸುಧಾಕರ ಜೊತೆ ಇದ್ದ ಪ್ರಿಯಾಂಕಾ ಮತ್ತೆ ಬೆಳಗಾವಿ ಮೂಲದ ರೋಹಿತ್ ಜೊತೆ ಮದುವೆ ಆಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button