Latest

* ಭೀಕರ ವಿಮಾನ ಪತನ: 62 ಜನರು ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಜನವಸತಿ ಪ್ರದೇಶದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, 62 ಜನರು ಸಾವನ್ನಪ್ಪಿರುವ ಗಹ್ಟನೆ ಬ್ರೆಜಿಲ್ ನ ಸಾವೊ ಪಾಲೊ ನಗರದಲ್ಲಿ ನಡೆದಿದೆ.

ಎಟಿಆರ್-72 ಟರ್ಬೊಪ್ರೊಪ್ ವಿಮನ ಪರಾನಾ ರಾಜ್ಯದ ಕ್ಯಾಸ್ಕಾವೆಲ್ ನಿಂದ ಸಾವೊ ಪಾಲೊದಲ್ಲಿನ ಗೌರುಲ್ಲ್ಹೋಸ್ ಗೆ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಸಾವೊಪಾಲೊ ನಗರದ ಜನವಸತಿ ಪ್ರದೇಸದಲ್ಲೇ ವಿಮಾನ ಪತನವಾಗಿದೆ.

ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ ಅ62 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕರಿಗಳು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ 58 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿಗಳು ಇದ್ದರು. ವಿಮಾನ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button