Karnataka NewsLatest

*ಶಿಕ್ಷಕಿಯ ಕತ್ತು ಕುಯ್ದು ಹತ್ಯೆಗೈದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ: ದುಷ್ಕರ್ಮಿಗಳ ಗುಂಪೊಂದು ಶಿಕ್ಷಕಿಯೋರ್ವರನ್ನು ಕತ್ತು ಕುಯ್ದು ಕೊಲೆ ಮಾಡಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುತ್ಯಾಲಪೇಟೆ ಬಡಾವಣೆಯ ಮನೆಯಲ್ಲಿ ನಡೆದಿದೆ.

ದಿವ್ಯಶ್ರೀ (47) ಹತ್ಯೆಯಾಗಿರುವ ಶಿಕ್ಷಕಿ. ಉದ್ಯಮಿ ಪದ್ಮನಾಭ ಅವರ ಪತ್ನಿ ದಿವ್ಯಶ್ರೀ ಮುತ್ಯಾಲಪೇಟೆ ಬಡಾವಣೆಯ ಮನೆಯಲ್ಲಿ ಮಗಳೊಂದಿಗೆ ವಾಸವಾಗಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ದಿವ್ಯಶ್ರೀ ಅವರ ಕತ್ತು ಕುಯ್ದು ಹತ್ಯೆ ಮಾಡಿದ್ದಾರೆ.

Home add -Advt

ಇದೇ ವೇಳೆ ದಿವ್ಯಶ್ರೀ ಮಗಳ ಮೇಲೂ ದಾಳಿ ನಡೆಸಿದ್ದಾರೆ. ಆದರೆ ಆಕೆ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾಳೆ. ದಿವ್ಯಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ದಿವ್ಯಶ್ರೀ ಮುಳಬಾಗಿಲು ತಾಲೂಕಿನ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಘತನಾ ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button