Belagavi NewsBelgaum NewsKannada NewsKarnataka News

*ಭಾರಿ ಮಳೆಗೆ ಅಂಗಡಿ ಮುಂಗಟ್ಟುಗಳಿಗೆ ಹೊಕ್ಕ ನೀರು: ಜನಜೀವನ ಅಸ್ತವ್ಯಸ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಅಂಗಡಿ ಮುಂಗಟ್ಟುಗಳಿಗೆ ನೀರು ಹೋಗಿ ಅಪಾರ ಹಾನಿಯಾಗಿದೆ.

ಭಾರಿ ಮಳೆಯ ಕಾರಣ ಕೆಲಕಾಲ ರಸ್ತೆ ಸಂಚಾರ ಬಂದಾಗಿತ್ತು. ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಬಂದು, ಹೊಲ, ಗದ್ದೆಗಳೆಲ್ಲ ನೀರಿನಲ್ಲಿ ಜಲಾವೃತವಾಗಿತ್ತು, ನೇಸರಗಿ ಬಸ್ ನಿಲ್ದಾಣ, ಪೇಟೆ ರಸ್ತೆ, ದೇಶನೂರ ರಸ್ತೆ, ಗೋಕಾಕ ರಸ್ತೆ, ದೇವರಕೊಂಡ ಅಜ್ಜಾನ ಗುಡಿ ರಸ್ತೆ, ಸುತಗಟ್ಟಿ ಹೊಲಕ್ಕೆ ಹೋಗುವ ರಸ್ತೆ ಗ್ರಾಮದ ಎಲ್ಲ ಕಡೆ ಮಳೆ ನೀರಿನಿಂದ ಜಲಾವೃತವಾಗೊಂಡಿತ್ತು.

Home add -Advt

ಒಮ್ಮೆಲೇ ಸುರಿದ ಭಾರಿ ಮಳೆಗೆ ರಸ್ತೆಗಳು ನೀರಿನ ಹೊಂಡಗಳಂತಾಗಿ ರಸ್ತೆಗಳ ಪಕ್ಕ ಇರುವ ಮನೆಗಳು, ಅಂಗಡಿಗಳ ಒಳಗೆ ನೀರು ತುಂಬಿ ಹೊರಗೆ ಹಾಕುತ್ತ, ಗ್ರಾ ಪಂ ಅಧಿಕಾರಿಗಳ ವಿರುದ್ದ ಹರಿ ಹಾಯ್ದರು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು.

Related Articles

Back to top button