Belagavi NewsBelgaum NewsKannada NewsKarnataka NewsNationalPolitics

*ಸಿಎಂ ಸಿದ್ದರಾಮಯ್ಯಗೆ ಕೌಂಟರ್ ಕೊಟ್ಟ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ : ಮುಡಾದ ಕೆಲ ದಾಖಲೆಗಳಿಗೆ ವೈಟ್ನರ್ ಹಚ್ಚಿದ ಕುರಿತು ಸಿಎಂ ಸಿದ್ದರಾಮಯ್ಯ ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುವುದನ್ನು ದಾಖಲೆಗಳ ಮೇಲೆ ವೈಟ್ನ‌ರ್ ಹಚ್ಚಿರುವ ಕಡೆ ಟಾರ್ಚ್ ಹಾಕಿ ಸ್ಪಷ್ಟನೆ ನೀಡಿದ್ದರು. ಈ ಕುರಿತಾದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದರು.

ಈ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟ್ವಿಟ್ ಮಾಡಿ ಟಾಂಗ್ ನೀಡಿದ್ದು, ಸಿದ್ದರಾಮಯ್ಯ ಅವರೇ. ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ರಾಜ್ಯದ ಸಿಎಂ ಆಗಿರುವ ನಿಮಗೆ ಶೋಭೆ ತರಲ್ಲ. ಇದು ಮೂಲ ದಾಖಲೆ, ಮೂಡಾದಲ್ಲಿದೆ. ನಿಮ್ಮ ಬಳಿಗೆ ಹೇಗೆ ಬಂತು ಎಂದು ಹೆಚ್ಚಿಕೆ ಪ್ರಶ್ನಿಸಿದ್ದಾರೆ.

Home add -Advt

ನಿಮಗೆ ಮುಡಾದ ಈ ಮೂಲ ದಾಖಲೆ ತಂದು ಕೊಟ್ಟ ಮಹಾಶಯರು ಯಾರು, ಇಷ್ಟಕ್ಕೂ ಈ ಮೂಲ ದಾಖಲೆ ಮೂಡಾದಲ್ಲಿದೆಯಾ ಅಥವಾ ನಿಮ್ಮ ಮನೆಯಲ್ಲಿದೆಯಾ ಎಂದು ಕೇಳಿದ್ದಾರೆ. ಈ ಮೂಲ ದಾಖಲೆಗೆ ಟಾರ್ಚ್ ಹಾಕಿದವರು ಯಾರು? ನೀವಾ ಅಥವಾ ಇನ್ನಾರಾದರೂ ಇದ್ದಾರಾ ಎಂದು ಹೆಚ್ಚಿಕೆ ಕೇಳಿದ್ದಲ್ಲದೇ, ಈ ದಾಖಲೆಯನ್ನೇಕೆ ನೀವು ಕೋರ್ಟ್‌ಗೆ ಕೊಟ್ಟಿಲ್ಲ. ನ್ಯಾಯಾಲಯವನ್ನೂ ದಾರಿ ತಪ್ಪಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.

Related Articles

Back to top button