ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಸರಣಿ ಮುಂದುವರಿದಿದ್ದು, ಶುಕ್ರವಾರ ಹಿಂಡಲಗಾದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮದ ಸಾಯಿನಂದನ್ ರೆಸಿಡೆನ್ಸಿ ಹಾಗೂ ರಕ್ಷಕ್ ಕಾಲೋನಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ, ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಇಲಾಖೆಯ ಕೆಲಸ ಕಾರ್ಯಗಳು, ಬಿಡುವಿಲ್ಲದ ಪ್ರವಾಸದ ಮಧ್ಯೆಯೂ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿರುವ ಸಚಿವರು, ಸ್ಥಳದಲ್ಲಿಯೇ ಸಾರ್ವಜನಿಕರ ಕುಂದುಕೊರತೆಗಳನ್ನೂ ಆಲಿಸಿ, ಪರಿಹಾರ ಒದಗಿಸಿದರು.
ಗ್ರಾಮೀಣ ಕ್ಷೇತ್ರ ನನ್ನ ಕುಟುಂಬದಂತಿದೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುವುದಿಲ್ಲ. ಜೊತೆಗೆ ಕ್ಷೇತ್ರದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದೇನೆ. ಕ್ಷೇತ್ರಕ್ಕೆ ಸಾಕಷ್ಟು ಶಾಶ್ವತ ಯೋಜನೆಗಳನ್ನು ತರುತ್ತಿದ್ದು, ಇದೇ ರೀತಿ ಜನರ ಸಹಕಾರ ಅಗತ್ಯ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಈ ವೇಳೆ ಡಿ.ಬಿ ಪಾಟೀಲ, ರಾಹುಲ್ ಉರನಕರ್, ವಿಠ್ಠಲ ದೇಸಾಯಿ, ಶಿವಾಜಿ ಅತವಾಡ್ಕರ್, ಪ್ರವೀಣ ಪಾಟೀಲ, ಸಂತೋಷ ಫರ್ನಾಂಡೀಸ್, ಭರಮಾ ಪಾಟೀಲ, ಕಿತ್ತೂರ್ ಮೆಡಮ್, ದೇಸಾಯಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು.
ನಂತರ ಹಿಂಡಲಗಾ ಸಮರ್ಥ ನಗರದ ಕಾಂಗ್ರೆಸ್ ಮುಖಂಡರಾದ ಪರಶುರಾಮ ಕುಡಚಿಕರ್ ಅವರ ಮನೆಯಲ್ಲಿ ಸಭೆ ನಡೆಸಿ, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಸಭೆಯಲ್ಲಿ ಪರಶುರಾಮ ಕುಡಚಿಕರ್, ಶಿವಾಜಿ ಸಾಲ್ಗುಡೆ, ಬಸವಂತ ಕುಂಡೇಕರ್, ಪ್ರಶಾಂತ ಜಾಧವ್, ನಾರಾಯಣ ಜಾಧವ್, ಅಶ್ವಿನಿ ಜಾಧವ್, ಗೀತಾ ಸಾಲ್ಗುಡೆ, ತಾನಾಜಿ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ