Karnataka NewsLatest

*ಅಪ್ರಾಪ್ತೆ ಹಾಗೂ ಯುವಕ ಆತ್ಮಹತ್ಯೆಗೆ ಯತ್ನ; ಬಾಲಕಿ ಸಾವು; ಯುವಕ ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಪ್ರೀತಿ-ಪ್ರೇಮದ ಬಲೆಗೆ ಬಿದ್ದು, ಅಪ್ರಾಪ್ತ ಬಾಲಕಿ ಜೀವನವನ್ನೇ ಕೊನೆಗಾಣಿಸಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಹಾಗೂ ಯುವಕ ವಿಷ ಸೇವಿಸಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಶ್ಮಿ (16) ಮೃತ ಬಾಲಕಿ. ನಿಡಮಾಕನಹಳ್ಳಿ ಗ್ರಾಮದ ರಶ್ಮಿ ಹಾಗೂ ಆಲಹಳ್ಳಿ ಗ್ರಾಮದ ಯುವಕ ಅಭಿಷೇಕ್ ಪರಸ್ಪರ ಪ್ರೀತಿಸುತ್ತಿದ್ದರು. ಓದಿ ಸಂತಕಾಲಮೇಲೆ ನಿಂತು ಬದುಕು ರೂಪಿಸಿಕೊಳ್ಳಬೇಕಾದವರು, ಪ್ರೀತಿ-ಪ್ರೇಮ ಎಂದು ಚಿಕ್ಕವಯಸ್ಸಿನಲ್ಲೇ ಮದುವೆಗೆ ನಿರ್ಧರಿಸಿದ್ದಾರೆ. ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಬಹುದು ಎಂಬ ಆತಂಕದಲ್ಲಿ ಇಬ್ಬರೂ ದುಡುಕಿನ ತೀರ್ಮಾನ ಮಾಡಿ ವಿಷ ಸೇವಿಸಿ, ಬಳಿಕ ದುಪ್ಪಟ್ಟಾದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Home add -Advt

ಬಾಲಕಿ ರಶ್ಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಯುವಕ ಅಭಿಷೇಕ್ ಸ್ಥಿತಿ ಗಂಭೀರವಾಗಿದ್ದು, ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button