Karnataka NewsPolitics

*ಹುಬ್ಬಳ್ಳಿ ಗಲಭೆ ಕೇಸ್: ಕೊರ್ಟ್ ಒಪ್ಪಿದ್ರೆ ವಾಪಸ್: ಸಿಎಂ*

 ಪ್ರಗತಿವಾಹಿನಿ ಸುದ್ದಿ: ಆರ್‌ಎಸ್‌ಎಸ್ ಮೇಲಿನ ಕೇಸ್ ವಾಪಸ್ ತಗೊಂಡ್ರಲ್ಲ. ಇದಕ್ಕೆ ಕಮಿಟಿ ರಚನೆ ಮಾಡಲಾಗಿತ್ತು. ಅದಕ್ಕೆ ಗೃಹ ಮಂತ್ರಿ ಅಧ್ಯಕ್ಷರು.ಕ್ಯಾಬಿನಟ್ ಮುಂದೆ ತಂದು ಒಪ್ಪಿಗೆ ಕೊಟ್ಟು ತೀರ್ಮಾನ ಆಗಿದೆ. ಇದು ಕೋರ್ಟ್‌ನಲ್ಲಿ ಸಲ್ಲಿಕೆ ಆಗಬೇಕು ಎಂದು ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮೈಸೂರಲ್ಲಿ ಮಾತಾಡಿದ ಅವರು, ಕೋರ್ಟ್ ಒಪ್ಪಿಕೊಂಡಾಗ ಮಾತ್ರ ಇದು ವಾಪಸ್ ಪಡೆಯಲು ಸಾಧ್ಯ ಆಗುತ್ತೆ. ಕೇಂದ್ರದಿಂದ ಅನುದಾನ ತಾರತಮ್ಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ಕೊಟ್ಟರು.ಉತ್ತರ ಪ್ರದೇಶಕ್ಕೆ ಬಂದಿರುವ ಪಾಲು ನೋಡಿ. ನಮಗೆ ಬಂದಿರುವ ಪಾಲನ್ನೂ ನೋಡಿ.ಅವರಿಗೂ ನಮಗೂ ಎಷ್ಟು ವ್ಯತ್ಯಾಸ ಇದೆ. ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಅಂತ ಜನ ದನಿ ಎತ್ತಬೇಕು. ಬಿಜೆಪಿಯವರು ಕೇಂದ್ರ ಸರ್ಕಾರವನ್ನ ಸಮರ್ಥನೆ ಮಾಡ್ಕೊಂಡು ಮಾತಾಡೋದು ಕರ್ನಾಟಕದ ಜನರಿಗೆ ಮಾಡೊ ದ್ರೋಹ ಎಂದು ಸಿಎಂ ಕಿಡಿಕಾರಿದ್ರು.ಇಷ್ಟೊಂದು ಜನ ಎಂಪಿ ಸೀಟ್ ಗೆಲ್ಲಿಸಿದ್ರೆ ರಾಜ್ಯದ ಪರ ದನಿ ಎತ್ತಬೇಕಲ್ವ? ಇವತ್ತಿನವರೆಗೆ ದನಿ ಎತ್ತಿಲ್ಲ. ಕರ್ನಾಟಕಕ್ಕೆ 5 ವರ್ಷದಲ್ಲಿ 60 ಸಾವಿರ ಕೋಟಿ ನಷ್ಟ ಆಗಿದೆ ಎಂದರು.

ಇನ್ನು ನಾಡಹಬ್ಬ ದಸರಾ ಯಶಸ್ವಿಯಾಗಿ ಮುಗಿದಿದೆ.ಈ ಬಾರಿ ಹೆಚ್ಚು ಜನ ದಸರಾ ನೋಡಲು ಬಂದಿದ್ದಾರೆ. ಜಿಲ್ಲಾಡಳಿತ ಅದ್ಧೂರಿಯಾಗಿ ದಸರಾ ಆಚರಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಳೆ ಬಂದಿದ್ದು ಬಿಟ್ರೆ, ಜನ ಖುಷಿಯಿಂದ ದಸರಾ ನೋಡಿದ್ದಾರೆ. ನಾಡ ಹಬ್ಬ ಆದ ಕಾರಣ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಜನ ಯಶಸ್ವಿ ಅಂದ್ರೆ ದಸರಾ ಯಶಸ್ವಿ ಅಂತಲೇ ಅರ್ಥ ಎಂದಿದ್ದಾರೆ.

Home add -Advt

Related Articles

Back to top button