ಪ್ರಗತಿವಾಹಿನಿ ಸುದ್ದಿ; ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ಧದ ಸಮರ ಮುಂದುವರೆದಿದೆ. ಸಿಸಿಬಿ ಪೊಲೀಸರು ಪೋಸ್ಟ್ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ವಿದೇಶದಿಂದ ಅಂಚೆ ಮೂಲಕ ಸರಬರಾಜಾಗುತ್ತಿದ್ದ ಡ್ರಗ್ಸ್ ಗಳನ್ನು ಜಪ್ತಿ ಮಾಡಿದ್ದಾರೆ.
ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಯುಎಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರ್ ಲ್ಯಾಂಡ್ ಹಾಗೂ ಇನ್ನಿತರ ದೇಶಗಳಿಂದ ಬಂದಿರುವ 606 ಪೋಸ್ಟ್ ಗಳಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್ ಗಳು ಬಂದಿರುವುದು ಪತ್ತೆಯಾಗಿದೆ.
ಶ್ವಾನದಳ ಸಹಾಯದಿಂದ ಸುಮಾರು 3500 ಪೋಸ್ಟ್ ಗಳನ್ನು ಪೊಲಿಸರು ಪರಿಶೀಲನೆ ನಡೆಸಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ಪೋಸ್ಟ್ ಮೂಲಕ ಡ್ರಗ್ಸ್ ರವಾನೆಯಾಗುತ್ತಿದೆ ಎಂಬುದು ದೃಢವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ