ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ಪಟ್ಟಣದ ಸೋಮವಾರ ಪೇಟೆಯ ನೇಕಾರ ಓಣಿಯಲ್ಲಿ ಗೊಂಧಳಿ ಸಮಾಜ ಹಾಗೂ ಶ್ರೀ ಗಜಾನನ ಯುವಕ ಮಂಡಳ ಇವರ ವತಿಯಿಂದ ನಾಡಹಬ್ಬ ದಸರಾ ವಿಜೃಂಭನೆಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುರುಗಳಾದ ಎಂ.ಎಫ್. ಜಕಾತಿ, ದಸರಾ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ನಾಡಿನಾದ್ಯಂತ ಹಬ್ಬವನ್ನು ಅತ್ಯಂತ ವೈಭವಪೂರ್ಣವಾಗಿ ಆಚರಿಸುತ್ತ ಬಂದಿದ್ದೇವೆ. ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲೂ ಕೂಡ ನೇಕಾರ ಓಣಿಯಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿ ದಸರಾ ಆಚರಿಸಲಾಗುತ್ತಿದೆ ಎಂದರು.
ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಲು ಒಳ್ಳೆಯ ಅವಕಾಶ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೈದ್ಯ ಡಾ. ಮೋಹನ ಅಂಗಡಿ ಮಾತನಾಡಿ, ನಾಡಿನ ಸಂಸ್ಕೃತಿ, ಪರಂಪರೆ ಮತ್ತು ದಸರಾ ಹಬ್ಬದ ಮಹತ್ವ ತಿಳಿಸಿದರು. ಟಿವಿ ವಾಹಿನಿ ಕಲಾವಿದರಿಂದ ರಸಮಂಜರಿ ಮತ್ತು ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆದವು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯ ಮೋಹನ ಅಂಗಡಿ, ಲೇಖಕ ಪ್ರವೀಣ ಗಿರಿ, ನಿವೃತ್ತ ಸೈನಿಕ ಸೋಮಯ್ಯ ಕಲ್ಮಠ, ಪೊಲೀಸ್ ಸಿಬ್ಬಂದಿ ಪುಂಡಲೀಕ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗೊಂಧಳಿ ಸಮಾಜದ ಹಿರಿಯರು, ಯುವಕರು ಮತ್ತು ಗಜಾನನ ಯುವಕ ಮಂಡಳದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ