
ಪ್ರಗತಿವಾಹಿನಿ ಸುದ್ದಿ: ಡಿವೈಡರ್ ಗೆ ಕಾರು ಡಿಕ್ಕಿಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ನಾಲ್ವರು ಭಾರತೀಯರು ಸಾವನ್ನಪ್ಪಿರುವ ಘಟನೆ ಕೆನಡಾದ ಟೊರೆಂಟೋದಲ್ಲಿ ನಡೆದಿದೆ.
ಭಾರತಿಯ ಮೂಲದ ನಾಲ್ವರು ಪ್ರಯಾಣಿಸುತ್ತಿದ್ದ ಟೆಸ್ಲಾ ಕಾರು ಡಿವೈಡರ್ ಗೆ ಡಿಕ್ಕಿಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ಕಾರಿನಿಂದ ಹೊರಬರಲಾಗದೇ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರನ್ನು ಗುಜರಾತ್ ನ ಗೋಧ್ರಾ ಮೂಲದ ಕೇತಾ ಗೋಹಿಲ್ (30), ನೀಲ್ ಗೋಹಿಲ್ (26) ಹಾಗೂ ಇವರ ಇಬ್ಬರು ಸ್ನೇಹಿತರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದ ಇತರ ವಾಹನ ಚಾಲಕರು ತಮ್ಮ ವಾಹನಗಳನ್ನು ನಿಲ್ಲಿಸಿ, ಬೆಂಕಿ ಹೊತ್ತಿಕೊಂಡಿದ್ದ ಕಾರಿನ ಗಾಜು ಒಡೆದು ಅದರಲ್ಲಿರುವವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ನಾಲ್ವರು ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ