Film & Entertainment

*ಸಿನಿಮಾದಲ್ಲಿ ಪ್ರೇಮಿಗಳಿಗೆ ತೊಂದರೆಕೊಟ್ಟಿದ್ದಕ್ಕೆ ಥಿಯೆಟರ್ ನಲ್ಲೇ ನಟನನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಸಿನಿಮಾ ನೋಡಲೆಂದು ಬಂದಿದ್ದ ಮಹಿಳೆಯೊಬ್ಬರು ಥಿಯೆಟರ್ ನಲ್ಲಿಯೇ ನಟನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

ತೆಲಗು ನಟ ಎನ್.ಟಿ.ರಾಮಸ್ವಾಮಿ ನಟಿಸಿರುವ ಲವ್ ರೆಡ್ಡಿ ಚಿತ್ರ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಬಳಿಕ ಮಹಿಳೆ ಥಿಯೇಟರ್ ಗೆ ಆಗಮಿಸಿದ್ದ ನಟನನ್ನು ಮನಬಂದಂತೆ ಥಳಿಸಿದ್ದಾಳೆ.

Home add -Advt

ಚಿತ್ರ ವೀಕ್ಷಿಸಿದ ಬಳಿಕ ಪ್ರೇಕ್ಷಕರಿಗೆ ಧನ್ಯವಾದ ಹೇಳಲೆಂದು ನಟ ಎನ್.ಟಿ.ರಾಮಸ್ವಾಮಿ ವೇದಿಕೆ ಬಂದಿದ್ದರು. ಈ ವೇಳೆ ವಿಕ್ಷಕರಲ್ಲಿ ಒಬ್ಬರಾಗಿದ್ದ ಮಹಿಳೆ ವೇದಿಕೆಯತ್ತ ಮುನ್ನುಗ್ಗಿ ರಾಮಸ್ವಾಮಿ ಅವರ ಕೊರಳಪಟ್ಟಿ ಹಿಡಿದು ಕಪಾಳ ಮೋಕ್ಷ ಮಾಡಿದ್ದಾಳೆ. ಅಲ್ಲದೇ ಯಾಕೆ ಸಿನಿಮಾದಲ್ಲಿ ನಾಯಕ ದಂಪತಿಗಳಿಗೆ ತೊಂದರೆ ಕೊಟ್ಟು ಬೇರ್ಪಡುವಂತೆ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾಳೆ. ನಟ ರಾಮಸ್ವಾಮಿ ಶಾಕ್ ಆಗಿದ್ದಾರೆ. ತಕ್ಷಣ ಮಹಿಳೆಯನ್ನು ಸಹ ನಟರು ತಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇದೇ ವೇಳೆ ವೇದಿಕೆಯಲ್ಲಿ ನಾಯಕ ನಟ ಅಂಜನ್ ರಾಮಚಂದ್ರ ಹಾಗೂ ಶ್ರಾವನಿ ಕೃಷ್ಣವೇಣಿ ಕೂಡ ಉಪಸ್ಥಿತರಿದ್ದರು. ವೈರಲ್ ವಿಡಿಯೋ ನೋಡಿ ಹಲವರು ಇದು ಸಿನಿಮಾದ ಪ್ರಚಾರದ ಗಿಮಿಕ್ ಎಂದಿದ್ದಾರೆ. ಆದರೆ ಈ ಬಗ್ಗೆ ನಟ ರಾಮಸ್ವಾಮಿಯಾಗಲಿ, ಚಿತ್ರತಂಡವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Related Articles

Back to top button