National

*ಶೌಚಾಲಯಕ್ಕಾಗಿ ಸೊಸೆಯಂದಿರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಛತ್ತೀಸ್‌ಘಡ ರಾಯ್‌ಪು‌ರದ ಬಸ್ತರ್ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಮಹಿಳೆಯರು ತಮಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ, 25 ಕಿಮೀ ದೂರದಲ್ಲಿರುವ ಜಗ್ಗಲ್‌ಪುರದ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರತಿಭಟನೆ ಈಗ ದೇಶವ್ಯಾಪಿ ಸುದ್ದಿಯಾಗಿದ್ದು, ಮಹಿಳೆಯರ ಧೈರ್ಯಕ್ಕೆ ಜನರು ಭಲೇ ಎಂದಿದ್ದಾರೆ. ಅನಾರೋಗ್ಯಕರವಾದ ಬಯಲು ಶೌಚಾಲಯ ಪದ್ದತಿಯನ್ನು ಜನರು ಬಿಡಬೇಕು. ಈ ಅನಕ್ಷರಸ್ಥ ಮಹಿಳೆಯರ ಪ್ರತಿಭಟನೆ ಸರ್ಕಾರದ ಕಣ್ಣು ತೆರೆಸಲಿ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

25 ಕ್ಕೂ ಹೆಚ್ಚು ಮಹಿಳೆಯರು ವಿಶಿಷ್ಟ ಉದ್ದೇಶಕ್ಕೆ ಪ್ರತಿಭಟನೆ ನಡೆಸುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರ ಪೈಕಿ ಬಹುತೇಕರು ಬೇರೆ ಊರಿನಿಂದ ಬಸ್ತರ್ ಗೆ ಸೊಸೆಯರಾಗಿ ಬಂದಂಥವರಾಗಿದ್ದು, ಈ ಮುನ್ನ ಸಿಟಿಯಲ್ಲಿ ಬೆಳೆದವರೂ ಸಹ ಇದ್ದಾರೆ. ನಮ್ಮ ಪತಿಯ ಊರಿನಲ್ಲಿ ಶೌಚಾಲಯವೇ ಇಲ್ಲ. ಬಯಲು ಶೌಚಾಲಯಕ್ಕೆ ಇಡೀ ಊರೇ ಹೊಂದಾಣಿಕೆ ಮಾಡಿಕೊಂಡುಬಿಟ್ಟಿದೆ. ನಮಗೆ ಬಯಲು ಶೌಚಾಲಯಕ್ಕೆ ಹೋಗಲು ವಿಪರೀತ ಸಂಕೋಚ, ನಾಚಿಕೆಯಾಗುತ್ತಿದೆ. ಬೆಳಗಿನ ಜಾವ ಮಾತ್ರ ಶೌಚಾಲಯಕ್ಕೆ ಹೋಗ ಬೇಕಾದ ಪರಿಸ್ಥಿತಿ ಎದುರಾಗಿದೆ. ಬೇರೆ ಸಮಯದಲ್ಲಿ ಶೌಚಕ್ಕೆ ಅವಸರವಾದರೂ ಜನಸಂಚಾರ ಇರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಊರಿನ ಜನಕ್ಕೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button