National

*ಹೈ ಪ್ರೊಫೈಲ್ ಪಾರ್ಟಿ ಮೇಲೆ ಪೊಲೀಸರ ದಾಳಿ*

ಪ್ರಗತಿವಾಹಿನಿ ಸುದ್ದಿ: ಹೈದ್ರಾಬಾದ್ ನಲ್ಲಿ ಹೈ ಪ್ರೊಫೈಲ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್ ಹೌಸ್ ಮೇಲೆ ರೇಡ್ ನಡೆದಿದೆ. ತೆಲಂಗಾಣ ಮಾಜಿ ಸಿಎಂ ಕೆಸಿಆ‌ರ್ ಸಹೋದರ ಕೆಟಿ ಆರ್ ಅವರ ಭಾಮೈದ ಅವರ ಫಾರಂ ಹೌಸ್ ನಲ್ಲಿ ಮಾದಕ ದ್ರವ್ಯಗಳ ಪಾರ್ಟಿ ನಡೆಯುತ್ತಿದ್ದ ಸಂದರ್ಭ ದಾಳಿ ನಡೆಸಲಾಗಿದೆ.

ಅನೈತಿಕ ಚಟುವಟಿಕೆಗಳು ನಡೆಯುತ್ತಿರೋದು ಹಾಗೂ ಪೆಡ್ಲರ್ ಗಳು ಇರೋ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ 21 ಪುರುಷರು ಹಾಗೂ 14 ಮಹಿಳೆಯರು ಪಾರ್ಟಿಯಲ್ಲಿ ಮೋಜು-ಮಾಸ್ತಿ ಮಾಡುತ್ತಿದ್ದರು. ಅವರೆಲ್ಲರನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ದುಬಾರಿ ಮದ್ಯದ ಬಾಟಲ್, ಸಿಗರೇಟ್, ಕಾಕ್ ಟೈಲ್ ಡ್ರಿಂಕ್ಸ್ ಬಾಟಲ್ ಗಳನ್ನ ಸೀಜ್ ಮಾಡಲಾಗಿದೆ. 21 ಜನರ ಪೈಕಿ ವಿಜಯ್ ಮುದ್ದಾರ್ ಎಂಬುವರು ಕೊಕೇನ್ ಸೇವಿಸಿರೋದು ಗೊತ್ತಾಗಿದೆ. ಅವರ ಬ್ಲಡ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ.

ಪಾರ್ಟಿ ಅಟೆಂಡ್ ಮಾಡಿದ್ದ ಬಹುತೇಕರು ಗಾಂಜಾ ಸೇವಿಸಿದ್ದರು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಪಾರ್ಟಿ ವೇಳೆ ಜೋರು ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Home add -Advt

Related Articles

Back to top button