Belagavi NewsBelgaum NewsKannada NewsKarnataka News

*ಅಸ್ತಿಪಂಜರವಾಗಿ ಪತ್ತೆಯಾದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಹನುಮಾನ್ ನಗರ ಗ್ರೀನ್ ಗಾರ್ಡನ್ ಹತ್ತಿರ ಇರುವ ಅರಣ್ಯ ಇಲಾಖೆಯ ವಸತಿ ಗೃಹ ಈಗ ಸರಕಾರಿ ನೌಕರರ ಸಂಘಕ್ಕೆ ಒಳಪಟ್ಟ ಪಾಳು ಬಿದ್ದ ಕಟ್ಟಡದಲ್ಲಿ ದಿನಾಂಕ: 6.04.2023 ರಂದು ಅಸ್ತಿ ಪತ್ತೆಯಾಗಿದೆ. 

ಮೃತನ ಅಸ್ತಿಗೆ ಸಂಬಂಧಿಸಿದಂತೆ ಯಾವುದೆ ದಾಖಲಾತಿಗಳು ಇರುವುದಿಲ್ಲ. ಈ ಬಗ್ಗೆ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಮೃತನ ಬಗ್ಗೆ ಎಲುಬುಗಳನ್ನು ಪರೀಕ್ಷೆ ಕುರಿತು ಬಿಮ್ಸ್ ಆಸ್ಪತ್ರೆಗೆ ಕಳಿಸಿದ್ದು, ವೈದ್ಯ ಪರೀಕ್ಷೆ ಮಾಡಿ ಪ್ರಮಾಣ ಪತ್ರ ನೀಡಲಾಗಿದೆ. 40-50 ವಯಸ್ಸಿನ ವ್ಯಕ್ತಿ ಮೂಳೆಗಳು ಎಂದು ದೃಢವಾಗಿದ್ದು, ಮೃತನ ಹೆಸರು ವಿಳಾಸ ಪತ್ತೆಯಾಗಿಲ್ಲ. ಮೃತ ಒಂದು ತಿಂಗಳ ಹಿಂದೆ ಮರಣ ಹೊಂದಿರಬಹುದು. ಮೃತನ ತಲೆ ಬುರುಡೆ ಹಾಗೂ ಎಲುಬುಗಳು ಮಾತ್ರ ಇದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ನೊಂದಿಗೆ ದೇಹದ ಮೇಲೆ ರಗ್ಗು ಹೊದಿಸಿದ ರೀತಿಯಲ್ಲಿ ಅಸ್ತಿಪಂಜರವಾಗಿ ಪತ್ತೆಯಾಗಿದ್ದಾನೆ.

Home add -Advt

Related Articles

Back to top button