Politics

*ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ: ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಆರ್.ಐ.ಡಿ.ಎಫ್ – ಟ್ರಾಂಚ್ ೩೦ರಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ೧೫ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಕಟ್ಟಡ ಕಾಮಗಾರಿಗಳನ್ನು ರೂ.೭೫.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

೧. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ನಿವೇಶನ ಲಭ್ಯವಿರುವ (೧) ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ (೨) ಮಾರುತಿ ನಗರ, ಬೆಂಗಳೂರು ಉತ್ತರ (೩) ಮಂಗಳೂರು ಪಟ್ಟಣ, ದಕ್ಷಿಣಕನ್ನಡ ಜಿಲ್ಲೆ (೪) ದಾಂಡೇಲಿ, ಉತ್ತರಕನ್ನಡ ಜಿಲ್ಲೆ (೫) ಹಳಿಯಾಳ, ಉತ್ತರಕನ್ನಡ ಜಿಲ್ಲೆ (೬) ಹುಬ್ಬಳ್ಳಿ, ಧಾರವಾಡ ಜಿಲ್ಲೆ (೭) ಮೇದೂರು, ಹಾವೇರಿ ಜಿಲ್ಲೆ (೮) ಮದ್ದೂರು ಪಟ್ಟಣ, ಮಂಡ್ಯ ಜಿಲ್ಲೆ (೯) ಸಾಗರ ಪಟ್ಟಣ, ಶಿವಮೊಗ್ಗ ಜಿಲ್ಲೆ (೧೦) ತುಮಕೂರು (೧೧) ಬೈಂದೂರು, ಉಡುಪಿ ಜಿಲ್ಲೆ (೧೨) ಅನಗೋಳ, ಬೆಳಗಾವಿ ಜಿಲ್ಲೆ (೧೩) ಬಾಗಲಕೋಟೆ (೧೪) ತಾಂಡ, ವಿಜಯಪುರ ಜಿಲ್ಲೆ ಮತ್ತು (೧೫) ಹೊಂಬಾಳ, ಗದಗ ಜಲ್ಲೆ ಈ ಸ್ಥಳಗಳಲ್ಲಿ ರೂ.೫.೦೦ ಕೋಟಿಗಳ ಘಟಕ ವೆಚ್ಚದಲ್ಲಿ ನಬಾರ್ಡ್ ಸಾಲ ಲೆಕ್ಕಶೀರ್ಷಿಕೆ: ೪೨೨೫-೦೩-೨೭೭-೨-೧೧ರ ಆಬ್ಜೆಕ್ಟೀವ್ ಕೋಡ್ (೪೩೬) ರಡಿ ಒದಗಿಸುವ ರೂ.೭೫.೦೦ ಕೋಟಿಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿ ಮುಖಾಂತರ ೧೫ ಮೆಟ್ರೀಕ್ ನಂತರದ ಬಾಲಕ / ಬಾಲಕಿಯರ ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ಕಾಮಗಾರಿಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ;
೨. ಪ್ರಸ್ತಾಪಿತ ಕಾಮಗಾರಿಗಳ ಒಟ್ಟು ಅಂದಾಜು ವೆಚ್ಚ ರೂ.೭೫.೦೦ ಕೋಟಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಬಾರ್ಡ್ ಸಾಲ ಲೆಕ್ಕಶೀರ್ಷಿಕೆ: ೪೨೨೫-೦೩-೨೭೭-೨-೧೧ರ ಆಬ್ಜೆಕ್ಟೀವ್ ಕೋಡ್ (೪೩೬) ರಡಿ ೨೦೨೫-೨೬ನೇ ಸಾಲಿನಲ್ಲಿ ಒದಗಿಸುವ ಅನುದಾನದಲ್ಲಿ ಭರಿಸಲು;
೩. ಈ ಕಾಮಗಾರಿಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ ೧೯೯೯ ರಡಿ ಇ-ಪೋರ್ಟಲ್ ಮುಖಾಂತರ ಟೆಂಡರ್ ಆಹ್ವಾನಿಸಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು; ಸಚಿವ ಸಂಪುಟ ನಿರ್ಧರಿಸಿದೆ.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ನ್ಯೂರಾಲಜಿ ಮತ್ತು ನ್ಯೂರೋಸರ್ಜರಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಗಳ ಒಟ್ಟು ರೂ.೩೩.೭೭ ಕೋಟಿಗಳ ಅಂದಾಜು ಮೊತ್ತಕ್ಕೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಧರಿಸಿದೆ.
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಧಾರವಾಡ ಈ ಸಂಸ್ಥೆಯ ಆಸ್ಪತ್ರೆಯಲ್ಲಿ ನ್ಯೂರಾಲಜಿ ಮತ್ತು ನ್ಯೋರೋ ಸರ್ಜರಿ ವಿಭಾಗವನ್ನು ಸ್ಥಾಪಿಸುವ ಸಂಬಂಧ, ಸಿವಿಲ್ ಕಾಮಗಾರಿಗೆ ರೂ.೨೩.೫೦ ಕೋಟಿಗಳು ಮತ್ತು ಉಪಕರಣಗಳಿಗೆ ರೂ.೧೦.೨೭ ಕೋಟಿಗಳು ಸೇರಿ, ಒಟ್ಟು ರೂ.೩೩.೭೭ ಕೋಟಿಗಳ ಅಂದಾಜು ಮೊತ್ತದಲ್ಲಿ ಸಂಸ್ಥೆಯ ಆಂತರಿಕ ಸಂಪನ್ಮೂಲದಿAದ ವೆಚ್ಚ ಭರಿಸಿ ಸ್ಥಾಪಿಸುವುದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಆವರಣದಲ್ಲಿನ ಕ್ರೀಡಾ ಮತ್ತು ರೋಬೋಟಿಕ್ ಶಸ್ತç ಚಿಕಿತ್ಸಾ ವಿಭಾಗದ ನೂತನ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳು, ಇತ್ಯಾದಿಗಳನ್ನು ರೂ.೧೪.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟ ಅನುಮೋದಿಸಿದೆ.
ಸಂಜಯಗಾAಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಆವರಣದಲ್ಲಿನ ಕ್ರೀಡಾ ಮತ್ತು ರೋಬೋಟಿಕ್ ಶಸ್ತç ಚಿಕಿತ್ಸಾ ವಿಭಾಗದ ನೂತನ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳು ಇತ್ಯಾದಿಗಳನ್ನು ರೂ.೧೪.೦೦ ಕೋಟಿಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಹಾಗೂ ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿAದ ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನೆಫ್ರೋ-ಯುರಾಲಜಿ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅನೆಕ್ಸ್ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಒಟ್ಟು ರೂ.೨೧.೮೬ ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ-ಯುರಾಲಜಿ ಸಂಸ್ಥೆಯ ಅನೆಕ್ಸ್ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಒಟ್ಟು ರೂ.೨೧.೮೬ ಕೋಟಿಗಳ ಅಂದಾಜು ಮೊತ್ತದಲ್ಲಿ ಸಂಸ್ಥೆಯಲ್ಲಿ ಲಭ್ಯವಿರುವ ಆಂತರಿಕ ಸಂಪನ್ಮೂಲದಿAದ ವೆಚ್ಚ ಭರಿಸಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

ಕೇಂದ್ರ ಸರ್ಕಾರದ ೧೫ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಷ್ಟಿçÃಯ ವಿಪತ್ತು ಉಪಶಮನ ನಿಧಿ (ಓಆಒಈ) ಅಡಿಯಲ್ಲಿ ರೂ.೨೩೮.೭೨ ಕೋಟಿಗಳ ಅಂದಾಜು ಮೊತ್ತದ ನಗರ ಪ್ರವಾಹ ಅಪಾಯ ನಿರ್ವಹಣೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ.

ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯ ಅಡಿಯಲ್ಲಿ ಕೇಂದ್ರ ಸರ್ಕಾರ ಒದಗಿಸುವ ರೂ.೨೩೮.೭೨ ಕೋಟಿಯಲ್ಲಿ ನಗರ ಪ್ರವಾಹ ಅಪಾಯ ನಿರ್ವಹಣೆ ಕಾರ್ಯಕ್ರಮವನ್ನು
ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಎಲ್ಲಾ ನಿಬಂಧನೆಗಳನ್ನು ಅನುಸರಿಸಿ ಪಾರದರ್ಶಕ ಟೆಂಡರ್ ವ್ಯವಸ್ಥೆಯ ಮೂಲಕ ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರಿಂದ ಅನುಷ್ಠಾನಗೊಳಿಸಲು; ಸಚಿವ ಸಂಪುಟ ಅನುಮೋದನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆ ಕಸಬಾ ಹೋಬಳಿ ಹಿರೇಮಗಳೂರು ಗ್ರಾಮದ ಸರ್ವೇ ನಂ.೫೩೯ ರಲ್ಲಿರುವ ೧-೦೦ ಎಕರೆ ಜಮೀನನ್ನು ಮೇ. ತಾಜ್ ಕರ್ನಾಟಕ ಹೋಟೆಲ್ಸ್ ಮತ್ತು ರೆಸಾರ್ಟ್ (ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಮೆ. ನಡುವಿನ ಜಂಟಿ ಉದ್ಯಮ ಹೆಸರಿಗೆ ಹಕ್ಕು ವರ್ಗಾಯಿಸಲು; ಸಚಿವ ಸಂಪುಟವು ನಿರ್ಧರಿಸಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅನುಷ್ಟಾನಗೊಳಿಸಲು ಅನುಮೋದನೆಯಾಗಿರುವ ೧,೦೮,೨೫೩ ಮನೆಗಳ ಪೈಕಿ ಪ್ರಾರಂಭಿಸದೆ ಇರುವ ೬೧,೮೯೪ ಮನೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಈ ಮನೆಗಳನ್ನು ಪುನರ್ ಪ್ರಾರಂಭಿಸಲು ಮತ್ತು ಇದಕ್ಕೆ ಅಗತ್ಯವಿರುವ ರೂ.೨೬೪೩.೬೭ ಕೋಟಿಗಳನ್ನು ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ.
೧. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಘಟಕದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುಮೋದಿತವಾಗಿರುವ ೧,೮೦,೨೫೩ ಮನೆಗಳ ಪೈಕಿ ದಿನಾಂಕ: ೨೧.೧೨.೨೦೨೩ ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಸ್ಥಗಿತಗೊಳಿಸಿರುವಂತಹ ೬೧,೮೯೪ ಮನೆಗಳನ್ನು ಮೂಲಭೂತ ಸೌಕರ್ಯ ಒಳಗೊಂಡAತೆ ಪುನರ್ ಪ್ರಾರಂಭಿಸಲು ನಿರ್ಮಿಸಲು;

೨. ಸಚಿವ ಸಂಪುಟವು ದಿನಾಂಕ: ೨೧.೧೨.೨೦೨೩ರಲ್ಲಿ ಫಲಾನುಭವಿಗಳ ಪಾಲಿನ ವಂತಿಕೆಯ ಪೈಕಿ ಒಂದು ಲಕ್ಷಗಳನ್ನು ಮಾತ್ರ ಫಲಾನುಭವಿಗಳಿಂದ ಸಂಗ್ರಹಿಸಿಕೊAಡು, ಉಳಿದ ಫಲಾನುಭವಿ ವಂತಿಕೆಯನ್ನು ಸರ್ಕಾರದಿಂದ ಭರಿಸಲು ನಿರ್ಣಯ ಕೈಗೊಂಡಿದ್ದು, ಅದರನ್ವಯ ಸ್ಥಗಿತಗೊಳಿಸಿರುವ ೬೧,೮೯೪ ಮನೆಗಳನ್ನು ಪುನರ್ ಪ್ರಾರಂಭಿಸಲು ಅಗತ್ಯವಿರುವ ರೂ. ೨೪೭೫.೭೬ ಕೋಟಿಗಳು ಹಾಗೂ ಮೂಲ ಸೌಕರ್ಯ ಒದಗಿಸಲು ಅಗತ್ಯವಿರುವ ರೂ.೧೬೮ ಕೋಟಿಗಳು ಸೇರಿ ಒಟ್ಟು ರೂ. ೨೬೪೩.೭೬ ಕೋಟಿಗಳನ್ನು ಭರಿಸಲು; ಸದರಿ ಯೋಜನೆಯ ಮನೆಗಳ ಕಾಮಗಾರಿಗಳನ್ನು ಪುನರ್ ಪ್ರಾರಂಭಿಸುತ್ತಿರುವುದರಿಂದ ಪೂರ್ಣಗೊಳಿಸುವ ಕಾಲಾವಧಿಯನ್ನು ಕೇಂದ್ರ ಸರ್ಕಾರವು ವಿಸ್ತರಣೆ ಮಾಡಿರುವ ೩೧ನೇ ಡಿಸೆಂಬರ್ ೨೦೨೫ರ ಅವಧಿಗೆ ಸರಿ ಸಮಾನವಾಗಿ ವಿಸ್ತರಣೆ ಮಾಡಲು; ಸಚಿವ ಸಂಪುಟ ಅನುಮೋದಿಸಿದೆ.

೨೦೨೪-೨೫ನೇ ಸಾಲಿನ ಖIಆಈ-೩೦ರ ಯೋಜನೆಯಡಿ ಕೃಷಿ ಮಾರಾಟ ಇಲಾಖೆಯಿಂದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ೦೭ ಶೀತಲ ಗೃಹಗಳನ್ನು ನಿರ್ಮಿಸುವ ಹಾಗೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ನೂತನ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸುವ ರೂ.೧೧೮.೩೫ ಕೋಟಿಗಳ ಕಾಮಗಾರಿಗಳಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
೨೦೨೪-೨೫ನೇ ಸಾಲಿನ ಖIಆಈ-೩೦ರ ಯೋಜನೆಯಡಿ ಕೃಷಿ ಮಾರಾಟ ಇಲಾಖೆಯಿಂದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ೦೭ ಶೀತಲ ಗೃಹಗಳನ್ನು ನಿರ್ಮಿಸುವ ಹಾಗೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ನೂತನ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸುವ ರೂ.೧೧೮.೩೫ ಕೋಟಿಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button