ಪ್ರಗತಿವಾಹಿನಿ ಸುದ್ದಿ: ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೃತ್ಯದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾಮುಕನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
38 ವರ್ಷದ ಅಶ್ಪಾಕ್ ಜೋಗನ್ ಕೊಪ್ಪ ಬಂಧಿತ ಆರೋಪಿ. ಈತ ಟಿಪ್ಪುನಗರದಲ್ಲಿ ಝರಾಕ್ಸ್ ಅಂಗಡಿ ಹಾಗೂ ಮೊಬೈಲ್ ರಿಚಾರ್ಜ್ ಅಂಗಡಿ ನಡೆಸುತ್ತಿದ್ದ.
ತನ್ನ ಅಂಗಡಿಗೆ ಬರುವ ಬಡ ಹುಡುಗಿಯರ ಜೊತೆ ಬಣ್ಣ ಬಣ್ಣದ ಮಾತುಗಳನ್ನಾಡಿ ಅವರೊಂದಿಗೆ ಸ್ನೇಹ ಬೆಳೆಸಿ ಬಳಿಕ ಹಣದಾಸೆ ತೋರಿಸಿ ಪ್ರೀತಿ ಪ್ರೇಮದ ನಾಟಕವಾಡಿ ಅವರನ್ನು ನಂಬಿಸಿ ಅತ್ಯಾಚಾರವೆಸಗಿ, ಕೃತ್ಯದ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಡುತ್ತಿದ್ದ.
ಬಂಧಿತ ಆರೋಪಿ ಮೊಬೈಲ್ ಪರಿಶೀಲಿಸಿದಾಗ ಪೊಲೀಸರಿಗೆ ಈತ ಹಲವು ಮಹಿಳೆಯರ ಮೇಲೂ ಅತ್ಯಾಚಾರವೆಸಗಿರುವ ಹಾಗೂ ವಿಡಿಯೋ ಮಾಡಿಟ್ಟುಕೊಂಡಿರುವುದು ಪತ್ತೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ