ಪ್ರಗತಿವಾಹಿನಿ ಸುದ್ದಿ : ನೈಜೀರಿಯಾದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಪಲ್ಟಿಯಾದ ಇಂಧನ ಟ್ಯಾಂಕರ್ ಗೆ ಬೆಂಕಿ ತಗುಲಿ ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ.
ಬೆಂಕಿಯ ತೀವ್ರತೆ ನೋಡ ನೋಡ್ತಿದ್ದಂತೆ ವ್ಯಾಪಕವಾಗಿ ಹರಡಿದ್ದು, 70 ಮಂದಿ ಸುಟ್ಟು ಕರಕಲಾಗಿದ್ದಾರೆ. ಘನಘೋರ ದುರಂತಕ್ಕೆ ಇಡೀ ನೈಜೀರಿಯಾ ಬೆಚ್ಚಿಬಿದ್ದಿದೆ. 18 ತಿಂಗಳಲ್ಲಿ ಗ್ಯಾಸೋಲಿನ್ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಹೀಗಾಗಿಯೇ ಇಂಧನ ತೆಗೆದುಕೊಳ್ಳಲು ಧಾವಿಸಿದ 70 ಜನರು ಸಾವನ್ನಪ್ಪಿದ್ದಾರೆ.
ಫೆಡರಲ್ ರಾಜಧಾನಿ ಅಬುಜಾವನ್ನು ಉತ್ತರದ ನಗರ ಕಡುನಾಕ್ಕೆ ಸಂಪರ್ಕಿಸುವ ರಸ್ತೆಯ ಡಿಕ್ಕೊ ಜಂಕ್ಷನ್ನಲ್ಲಿ ಬೆಳಿಗ್ಗೆ 10:00 ರ ಸುಮಾರಿಗೆ ಘಟನೆ ನಡೆದಿದೆ. ಬರೋಬ್ಬರಿ 60,000 ಲೀಟರ್ ಗ್ಯಾಸೋಲಿನ್ ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದೆ.
ಹೆಚ್ಚಿನ ಬಲಿಪಶುಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಇಂಧನವನ್ನು ತೆಗೆದುಕೊಳ್ಳಲು ದೊಡ್ಡ ಜನಸಮೂಹ ಜಮಾಯಿಸಿದೆ. ಇದ್ದಕ್ಕಿದ್ದಂತೆ ಟ್ಯಾಂಕರ್ ಬೆಂಕಿಗೆ ತಗುಲಿ ಅವಘಡ ಸಂಭವಿಸಿದೆ. ಎಲ್ಲರೂ ಬೆಂಕಿಗೆ ಆಹುತಿಯಾಗಿದ್ದಾರೆ. ಪಕ್ಕದಲ್ಲಿದ್ದ ಮತ್ತೊಂದು ಟ್ಯಾಂಕರ್ ಗೂ ಬೆಂಕಿ ತಗುಲಿದೆ ಎನ್ನಲಾಗಿದೆ. ಈವರೆಗೆ 60 ಶವಗಳನ್ನು ಹೊರತೆಗೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ