*ಮೈಕ್ರೋ ಫೈನಾನ್ಸ್ ಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ: ಪರಮೇಶ್ವರ*
ಪ್ರಗತಿವಾಹಿನಿ ಸುದ್ದಿ : ಮೈಕ್ರೋ ಫೈನಾನ್ಸ್ ಗೆ ಮೂಗುದಾರ ಹಾಕೋಕೆ ಸರ್ಕಾರ ಮುಂದಾಗಿದೆ. ಕಠಿಣ ನಿಯಮ ಜಾರಿಗೆ ತರೋಕೆ ಸರ್ಕಾರ ಕಾನೂನು ರೂಪಿಸಿದೆ. ಕೆಲ ದಿನಗಳಲ್ಲೇ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬೀಳಲಿದ್ದು, ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಪರಂ, ಸದ್ಯ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರಾಗಿದೆ. ಸಿಎಂ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಆರೋಗ್ಯ ಸುಧಾರಣೆ ಬಳಿಕ ಸಿಎಂ, ಮೈಕ್ರೋ ಫೈನಾನ್ಸ್ ಕಾನೂನು ಸುಗ್ರೀವಾಜ್ಞೆಯ ಡ್ರಾಫ್ಟ್ ಪರಿಶೀಲನೆ ನಡೆಸಲಿದ್ದು, ಆ ನಂತರ ರಾಜ್ಯಪಾಲರಿಗೆ ಪ್ರತಿ ರವಾನೆ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿಯ ಒಳಜಗಳದ ಬಗ್ಗೆ ಹೆಚ್ಚು ಮಾತಾಡಲ್ಲ. ವಿಪಕ್ಷಗಳು ಅಭಿವೃದ್ಧಿ ನಿಟ್ಟಿನಲ್ಲಿ ಏನೇ ಸಲಹೆ ಸೂಚನೆ ಕೊಟ್ಟರು ತೆಗೆದುಕೊಳ್ಳುತ್ತೇವೆ. ಆ ಪಕ್ಷದ ಗೊಂದಲದ ಬಗ್ಗೆ ಅವರೇ ಬಗೆಹರಿಸಿಕೊಳ್ತಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ