ಪ್ರಗತಿವಾಹಿನಿ ಸುದ್ದಿ : ದೇಹಲಿಗೆ ಭೇಟಿ ನೀಡಲಿರುವ ರೆಬಲ್ಸ್ ಟೀಮ್, ವಿಜೇಂದ್ರ ವಿರುದ್ಧ ಮತ್ತೆ ಗುಡಗಿದೆ. ಯಡಿಯೂರಪ್ಪ ಮಗನ ಕರ್ಮಕಾಂಡ ಬಿಚ್ಚಿಡಲು ದೆಹಲಿಗೆ ಹೊರಟಿದ್ದೇವೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಕುಟುಂಬದಿಂದ ಪಕ್ಷವನ್ನು ಮುಕ್ತಗೊಳಿಸುತ್ತೇವೆ. ಇಷ್ಟು ದಿನ ವಿಜಯೇಂದ್ರ ವಿರುದ್ಧ ತಟಸ್ಥರಿದ್ದವರೂ ಈಗ ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಹೈಕಮಾಂಡ್ಗೆ ತಿಳಿಸಲು ಹೋಗುತ್ತಿದ್ದೇವೆ.
ಕುಟುಂಬಶಾಹಿ ವಿರುದ್ಧ ನಮ್ಮ ಹೋರಾಟ ಮುಂದುವರಿದಿದ್ದು, ವಿಜಯೇಂದ್ರನ ಕರ್ಮಕಾಂಡದ ಬಗ್ಗೆ ವಿವರಿಸಲು ದೆಹಲಿಗೆ ಹೋಗುತ್ತಿದ್ದೇವೆ. ರಾಜ್ಯಾಧ್ಯಕ್ಷನಾಗಿ ವಿಜಯೇಂದ್ರ ಮುಂದುವರಿದರೆ ಕರ್ನಾಟಕದಲ್ಲಿ ಪಕ್ಷಕ್ಕೆ ಹೀನಾಯ ಸ್ಥಿತಿ ಬರಲಿದೆ. ಅಪ್ಪ-ಮಗನಿಗೆ ಡಿಕೆಶಿ ಅವರು ಭಯಪಡಿಸಿದ್ದಾರೆ. ನಮ್ಮ ಹಗರಣ ಹೊರತೆಗೆದರೆ, ನಿಮ್ಮ ಪೋಕ್ಸೋ ಕೇಸ್ ಇದೆ, ನಕಲಿ ಸಹಿ ಮಾಡಿರುವ ಬಗ್ಗೆ ಹೊರತೆಗೆಯುತ್ತೇವೆ ಅಂತಾ ಡಿಕೆಶಿ ಹೆದರಿಸಿದ್ದಾರೆ. ಹೀಗಾಗಿ ನಮ್ಮ ಪಕ್ಷಕ್ಕೆ ಇಂತವರು ಬೇಡ ಎಂದು ವಿವರಿಸಲು ಹೈಕಮಾಂಡ್ ಬಳಿಗೇ ಹೋಗುತ್ತಿದ್ದೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ