ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಲು ಸಾಲು ಕಾರ್ಯಕ್ರಮಗಳು ಮುಗಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಕೆಲಸದ ಒತ್ತಡಗಳು ಇದ್ದರು ತಮ್ಮ ಬಾಲ್ಯದ ಸ್ನೇಹಿತನ ಅಂಗಡಿಗೆ ಭೇಟಿ ಕೊಟ್ಟು ಕೆಲಕಾಲ ಸಮಯ ಕಳೆದಿದ್ದಾರೆ.
ಯಾವುದೇ ಎಸ್ಕಾರ್ಟ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಆಗಮಿಸಿದ್ದ ಸತೀಶ್ ಜಾರಕಿಹೊಳಿ ಸುಮಾರು 1 ಗಂಟೆಕಾಲ ಅಂಗಡಿಯಲ್ಲಿ ಕಾಲ ಕಳೆದಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಆನಂದ ಚಿತ್ರ ಮಂದಿರದ ಬಳಿ ಇರೋ ಟಿವಿ ಅಂಗಡಿಗೆ ಸಚಿವ ಸತೀಶ್ ಜಾರಕಿಹೊಳಿ ಇಂದು ವಿಸಿಟ್ ಮಾಡಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯದ ಸ್ನೇಹಿತನ ಜೊತೆಗೆ ಹಳೆಯ ಹಾಡುಗಳನ್ನು ಕೇಳಿ ಎಂಜಾಯ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ