Karnataka News

*ವಿದ್ಯಾರ್ಥಿನಿಯರ ಮೇಲೆ ಕೆಮಿಕಲ್ ಮಿಶ್ರಿತ ಬಣ್ಣ ಎರಚಿದ ಕಿಡಿಗೇಡಿಗಳು*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿಯರ ಮೇಲೆ ಕಿಡಿಗೇಡಿಗಳು ಕೆಮಿಕಲ್ ಮಿಶ್ರಿತ ಬಣ್ಣ ಎರಚಿದ ಘಟನೆ ಗದಗದಲ್ಲಿ ನಡೆದಿದೆ.

ನಾಲ್ವರು ವಿದ್ಯಾರ್ಥಿನಿಯರ ಮೇಲೆ ಕಿಡಿಗೇಡಿಗಳ ಗುಂಪು ಕೆಮಿಕಲ್ ಮಿಶ್ರಿತ ಬಣ್ಣ ಎರಚಿದ್ದು, ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಸುವರ್ಣಗಿರಿ ತಾಂಡಾ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಗೌರಿ ಪೂಜಾರ, ದಿವ್ಯಾ ಲಮಾಣಿ, ಅಂಕಿತಾ ಲಮಾಣಿ ತನುಷಾ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು. ಉಸಿರಾಟದ ತೊಂದರೆ, ಎದೆನೋವಿನಿಂದ ವಿದ್ಯಾರ್ಥಿನಿಯರು ನರಳಾಡುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಲಕ್ಷ್ಮೀಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

Related Articles

Back to top button