Karnataka News

*ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವಕ; ನೊಂದ ಯುವತಿ ಆತ್ಮಹತ್ಯೆ; ಆಘಾತಕ್ಕೊಳಗಾದ ತಾಯಿಯೂ ಸಾವಿಗೆ ಶರಣು*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ಯುವಕ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಆತ್ಮಹಯೆಗೆ ಶರಣಾಗಿದ್ದು, ಮಗಳ ಸಾವಿನಿಂದ ಆಘಾತಕ್ಕೊಳಗಾದ ತಾಯಿಯೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ.

21 ವರ್ಷದ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಶರಣಾದ ಯುವತಿ. ಲಕ್ಷ್ಮೀ ಸಾವಿಗೆ ಶರಣಾಗಿರುವ ವಿಜಯಲಕ್ಷ್ಮೀ ತಾಯಿ. ಯುವಕ ಪ್ರೀತಿಸಿ ಕೈಕೊಟ್ಟ ಕಾರಣಕ್ಕೆ ಮನನೊಂದ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ನೋವಿನಲ್ಲಿದ್ದ ತಾಯಿ ಮಗಳು ಸಾವನ್ನಪ್ಪಿದ 20 ದಿನಕ್ಕೆ ತಾವೂ ಸಾವಿನ ದಾರಿ ಹಿಡಿದಿದ್ದಾರೆ.

Home add -Advt

ವಿಜಯಲಕ್ಷ್ಮೀ ಹಾಗೂ ಮಾರಸಿಂಗನಹಳ್ಳಿ ಹರಿಕೃಷ್ಣ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿಯ ನೆಪದಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಇತ್ತು. ಮದುವೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಹರಿಕೃಷ್ಣ ಇನ್ನೋರ್ವ ಯುವತಿ ಜೊತೆ ಓಡಾಡಲು ಶುರುಮಾಡಿದ್ದ.

ಹರಿಕೃಷ್ಣ ಮದುವೆಗೆ ನಿರಾಕರಿಸಿದ್ದಕ್ಕೆ ವಿಜಯಲಕ್ಷ್ಮೀ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಕೋರಿ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇಹ ಸಾಗಿಸಲು ಬಿಡದೇ ಮಂಡ್ಯ ಗ್ರಾಮಸ್ಥರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿದ್ದಂತೆ ಪೊಲೀಸರು ಆರೋಪಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Related Articles

Back to top button