ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿಯಲ್ಲಿ ಪ್ರವಾಹ ಬಂದು ಇದ್ದುದೆಲ್ಲವನ್ನೂ ಕಳೆದುಕೊಂಡು ದೀಪಾವಳಿಯನ್ನೂ ಆಚರಿಸಲಾಗದ ಸಂತ್ರಸ್ತರಿಗೆ ಭಾನುವಾರ ಶಾಸಕ ಅಭಯ ಪಾಟೀಲ ಖುಷಿ ಹಂಚಿದರು.
ಇಲ್ಲಿಯ ಲೇಲೆ ಮೈದಾನದಲ್ಲಿ ಸಂತ್ರಸ್ತರನ್ನೆಲ್ಲ ಆಹ್ವಾನಿಸಿ ಪರಾಳ ಹಂಚಿದ ಶಾಸಕರು, ಅವರೊಂದಿಗೆ 2 ಗಂಟೆಗಳಿಗೂ ಹೆಚ್ಚು ಕಾಲ ಲಗೋರಿ, ಗೋಲಿ ಮತ್ತಿತರ ಆಟಗಳನ್ನು ಆಡಿ ಅವರ ನೋವು ಮರೆಸುವ ಪ್ರಯತ್ನ ಮಾಡಿದರು.
ಆಗಸ್ಟ್ ತಿಂಗಳಲ್ಲಿ ಅಪ್ಪಳಿಸಿದ ಪ್ರವಾಹದ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ 7ೇತ್ರದ ಸುಮಾರು 3 ಸಾವಿರ ಜನರು ಸೂರು ಕಳೆದುಕೊಂಡಿದ್ದಾರೆ. ಅವರೆಲ್ಲ ಈ ಬಾರಿ ಕಣ್ಣೀರಲ್ಲೇ ಹಬ್ಬ ಆಚರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಶಾಸಕರು ಈ ಕಾರ್ಯಕ್ರಮ ಆಯೋಜಿಸಿದ್ದರು.
ಪ್ರವಾಹ ಸಂತ್ರಸ್ತರಿಗೆ ಮನೋರಂಜನೆ: ಭಾನುವಾರ ವಿಶೇಷ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ