Film & EntertainmentKannada NewsKarnataka News

*ನಿರ್ದೇಶಕ ಎಟಿ ರಘು ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಕನ್ನಡಕ್ಕೆ ಹಲವು ಹಿಟ್ ಸಿನೆಮಾಗಳನ್ನು ನೀಡಿದ ಕನ್ನಡ ಸಿನಿ ರಂಗದ ಹಿರಿಯ ನಿರ್ದೇಶಕ ಎಟಿ ರಘು ಅನಾರೋಗ್ಯದಿಂದ (76) ವಿಧಿವಶರಾಗಿದ್ದಾರೆ. 

ರಾತ್ರಿ 9:20ರ ಸುಮಾರಿಗೆ ಕೊನೆಯುಸಿರೆಳೆದಿದ್ದು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಸದ್ಯ ಆರ್‌ಟಿ ನಗರದ ಮಠದಹಳ್ಳಿಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಇವತ್ತು ಮದ್ಯಾಹ್ನ 3 ಗಂಟೆಯೊಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ರೆಬೆಲ್ ಸ್ಟಾರ್ ಅಂಬರೀಶ್ ಗೆ ಮಂಡ್ಯದ ಗಂಡು ಚಿತ್ರ ನಿರ್ದೇಶಿಸಿದ್ದ ರಘು ಸಾಕಷ್ಟು ಹೆಸರು ತಂದುಕೊಟ್ಟಿದ್ದರು. ತಮ್ಮ ನೇರ ನುಡಿಯ ಮೂಲಕ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.

Related Articles

Back to top button