Belagavi NewsBelgaum News

*ಹೀರೆಬಾಗೇವಾಡಿ ಬಳಿ ಭೀಕರ ಸರಣಿ ಅಪಘಾತ*

ಪ್ರಗತಿವಾಹಿನಿ ಸುದ್ದಿ: ಹೀರೆಬಾಗೇವಾಡಿ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಎರಡು ಲಾರಿ,‌ ಎರಡು‌ ಬಸ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.

ಭಾರಿ ಮಳೆಯಿಂದಾಗಿ ಹೀರೇಬಾಗೆವಾಡಿ ಬಳಿಯ ಬಡೆಕೊಳ್ಳ ಘಾಟ್ ನಲ್ಲಿ ಅಪಘಾತ ಸಂಭವಿಸಿದ್ದು, ಲಾರಿ‌ಯೊಂದು ಬಸ್ ನ ಹಿಂಬದಿ ಡಿಕ್ಕಿ ಹೊಡೆದಿದೆ. ಇದೇ ವೇಳೆ ಮತ್ತೊಂದು ಬಸ್ ದ್ವಿಚಕ್ರ ವಾಹನದ ನಡಿವೆ ಅಪಘಾತ ಸಂಭವಿಸಿದೆ. ಮತ್ತೊಂದು ಕಂಟೆನರ್ ಕೂಡ ಪಲ್ಟಿಯಾಗಿದೆ.

ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button