Belagavi NewsBelgaum NewsKannada NewsKarnataka NewsNationalPolitics
*ಮೊಲ ಬೇಟೆಯಾಡಿ ರೋಡ್ ಶೋ: ಶಾಸಕನ ಪುತ್ರ ಹಾಗೂ ಸೋದರನ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ : ಮೊಲಗಳನ್ನು ಬೇಟೆಯಾಡಿ ರೋಡ್ ಶೋ ನಡೆಸಿದ ಮಸ್ಕಿ ಶಾಸಕ ಬಸನಗೌಡ ತುರವೀಹಾಳ್ ಪುತ್ರ ಹಾಗೂ ಸೋದರನ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ಮಸ್ಕಿಯ ಶಂಕರಲಿಂಗ ಜಾತ್ರೆಯಲ್ಲಿ ಭಾಗಹಿಸಿದ್ದ ತುರವೀಹಾಳ್ ಅವರ ಪುತ್ರ ಮತ್ತು ಸೋದರ ಈ ಮೊಲಗಳನ್ನು ಬೇಟೆಯಾಡಿದ್ದಲ್ಲದೇ, ಅವುಗಳನ್ನು ಮಾರಕಾಸ್ತ್ರಗಳೊಂದಿಗೆ ಪ್ರದರ್ಶಿಸಿ ಮೆರವಣಿಗೆ ಮಾಡಿದ್ದರು. ಕಾಡುಮೊಲಗಳನ್ನು ಬೇಟೆಯಾಡಿ ಭರ್ಜಿಗೆ ಚುಚ್ಚಿ ಮಹಾನ್ ಸಾಧನೆಗೈದವರ ರೀತಿಯಲ್ಲಿ ರೋಡ್ ಶೋ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕುರಿತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಡಿಸಿಎಫ್ ಪ್ರವೀಣ್ ಅವರು, ಶಾಸಕರ ಪುತ್ರ ಇರಲಿ ಅಥವಾ ಸೋದರ ಇರಲಿ. ಅಪರಾಧ ಅಪರಾಧವೇ. ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




