Latest

*ಧರೆಗುರುಳಿದ ಅನಧಿಕೃತ ಬ್ಯಾನರ್: ನಾಲ್ವರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಅನಧಿಕೃತ ಬ್ಯಾನರ್ ಮುರಿದು ಬಿದ್ದ ಪರಿಣಾಮ ನಾಲ್ವರಿಗೆ ಗಾಯಗಳಾಗಿರುವ ಘಟನೆ ನಗರದ ನಾಗರಭಾವಿ ವೃತ್ತದ ಬಳಿ ನಡೆದಿದೆ.

ನಿರಂತರವಾಗಿ ಬೀಸಿದ ಗಾಳಿ ಮತ್ತು ಮಳೆಗೆ ಸರ್ಜಾಪುರ ಸಮೀಪದ ಯಮರೆ ಗ್ರಾಮ ಪಂಚಾಯಿತಿ ಬಳಿ ಇರುವ ಮಾರುತಿ ಸೂಜುಕಿ ಶೋರೂಂ ಬಳಿ ಇದ್ದ ಬೃಹತ್ ಗಾತ್ರದ ಜಾಹೀರಾತು ಫಲಕ ಧರೆಗುರುಳಿದೆ. ದುರ್ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.

Home add -Advt

ಬೆಂಗಳೂರಿನ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಮತ್ತು ಅವರ ಪುತ್ರ ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಲು ಅಭಿಮಾನಿಗಳು ಫ್ಲೆಕ್ಸ್’ಗಳನ್ನು ಹಾಕಿದ್ದರು ಎನ್ನಲಾಗಿದೆ

ಸರ್ಜಾಪುರ ಬೆಂಗಳೂರು ರಸ್ತೆಯ ಉದ್ದಕ್ಕೂ ಖಾಸಗಿ ನಿವೇಶನ ಮತ್ತು ಕಟ್ಟಡಗಳ ಮೇಲೆ ಅನಧಿಕೃತವಾದ ಜಾಹೀರಾತು ಫಲಕಗಳು ನೂರಾರು ಸಂಖ್ಯೆಯಲ್ಲಿ ಇದ್ದು ಇವು ಜನರ ಜೀವಗಳಿಗೆ ಕಂಟಕವಾಗಿದೆ. ಈಗಾಗಲೇ ಇಲ್ಲಿನ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದರು ಕೂಡಾ ಇಲ್ಲಿನ ಅಧಿಕಾರಿಗಳು ಕಂಡು ಕಾಣದಂತೆ ಮೂಕರಾಗಿದ್ದಾರೆ.

ಈಗಾಗಲೇ ಸರ್ಜಾಪುರ ಬೆಂಗಳೂರು ಮುಖ್ಯ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬೃಹತ್ ಗಾತ್ರದ ಜಾಹೀರಾತು ಫಲಕಗಳನ್ನು ಅಳವಾಡಿಸಿದ್ದು ಸರ್ಜಾಪುರದ ಬಾಬಯ್ ಟಿಫನ್ ಹೊಟೇಲ್ ಮತ್ತು ಡಿಮಾರ್ಟ್ ಪಕ್ಕದಲ್ಲಿ ಅತ್ಯಂತ ದೊಡ್ಡಗಾತ್ರದಲ್ಲಿ ಜಾಹೀರಾತು ಫಲಕವನ್ನು ಅಳವಾಡಿಸಿದ್ದಾರೆ. ಒಂದು ವೇಳೆ ಈ ಎರಡು ನಾಮಫಲಕಗಳು ಧರೆಗುರುಳಿದರೆ ಸಾವು ನೋವುಗಳು ಸಂಭವಿಸಬಹುದಾಗಿದೆ.

Related Articles

Back to top button