Belagavi NewsBelgaum NewsKannada NewsKarnataka NewsLatest

*ಬೆಳಗಾವಿಗೆ ಪ್ರಥಮ ಸ್ಥಾನ*

ಡಿಪ್ಲೋಮಾ ಇನ್ ನರ್ಸಿಂಗ್ ಪರೀಕ್ಷೆ: “ಸರ್ಕಾರಿ ಶುಶ್ರೂಷ ಶಾಲೆ ಬಿಮ್ಸ್ ಬೆಳಗಾವಿಗೆ ಪ್ರಥಮ ಸ್ಥಾನ”

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಹಾಗೂ ಅರೆ ವೈದ್ಯಕೀಯ ಮಂಡಳಿ ಬೆಂಗಳೂರು, ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಪರೀಕ್ಷೆಗಳಲ್ಲಿ ರಾಜ್ಯದ ವಿಭಾಗವಾರು ಅತೀ ಹೆಚ್ಚು ಅಂಕ ಪಡೆದಿರುವ ಬೆಳಗಾವಿ ಬಿಮ್ಸ್ ಸರ್ಕಾರಿ ಶುಶ್ರೂಷ ಶಾಲೆ ವಿಭಾಗದ ಪ್ರಥಮ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿರುತ್ತದೆ.

ರಾಜ್ಯದ ಒಟ್ಟು 18 ಸರ್ಕಾರಿ ನರ್ಸಿಂಗ್ ಶಾಲೆಗಳಲ್ಲಿ ಬೆಳಗಾವಿ ಬಿಮ್ಸ್ ಸರ್ಕಾರಿ ಶುಶ್ರೂಷ ಶಾಲೆ ಪ್ರಥಮ ಸ್ಥಾನದಲ್ಲಿದ್ದು ರಾಜ್ಯದ ಒಟ್ಟು 800 ಸರ್ಕಾರಿ ಹಾಗೂ ಖಾಸಗಿ ನರ್ಸಿಂಗ್ ಶಾಲೆಗಳಲ್ಲಿ ಬೆಳಗಾವಿ ಬಿಮ್ಸ್ ಸರ್ಕಾರಿ ಶುಶ್ರೂಷ ಶಾಲೆ ದ್ವಿತೀಯ ಸ್ಥಾನ ಪಡೆದಿರುತ್ತದೆ.

ಬೆಳಗಾವಿ ಬಿಮ್ಸ್ ಸರ್ಕಾರಿ ಶುಶ್ರೂಷ ಶಾಲೆ ವಿದ್ಯಾರ್ಥಿನಿಯರಾದ ದಿವ್ಯಾ ಡಿ.ಸಿ 84% ಪ್ರತಿಶತ ಅಂಕ ಪಡೆದು ಪ್ರಥಮ ಹಾಗೂ ನೈನಾ ಶ್ರೀಧರ ಪೂಜಾರಿ 83.63% ಪ್ರತಿಶತ ಅಂಕ ಪಡೆದು ನಾಲ್ಕನೇಯ ಸ್ಥಾನ ಪಡೆದಿರುತ್ತಾರೆ.

Home add -Advt

ಸರ್ಕಾರಿ ಶುಶ್ರೂಷ ಶಾಲೆಯ ವಿದ್ಯಾರ್ಥಿಗಳು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬಿಮ್ಸ್ ಹಾಗೂ ಡೀನ್ ನಿರ್ದೇಶಕ

ಡಾ. ಅಶೋಕ ಕುಮಾರ ಶೆಟ್ಟಿ, ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಡಾ. ಸಿದ್ದು ಹುಲ್ಲೋಳಿ, ಪ್ರಾಂಶುಪಾಲರಾದ ಡಾ. ಪ್ರಕಾಶ ಕೊಡ್ಲಿ ಅಭಿನಂದನೆ ಸಲ್ಲಿಸಿರುತ್ತಾರೆ. 

ವಿದ್ಯಾರ್ಥಿಗಳಿಗೆ ಸನ್ಮಾನ: 

ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಹಾಗೂ ಬೆಂಗಳೂರು ಅರೆ ವೈದ್ಯಕೀಯ ಮಂಡಳಿ ವತಿಯಿಂದ ಬೆಂಗಳೂರಿನ ಬಿ.ಎಂ.ಸಿ.ಆರ್.ಐ 4ನೇ ಮಹಡಿ ಸಭಾಂಗಣದಲ್ಲಿ ಶುಕ್ರವಾರ (ಜೂ.13) ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಳಿಗೆ ಲ್ಯಾಪ್ ಟಾಪ್ ಮತ್ತು ಟ್ಯಾಬ್ ವಿತರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೈದ್ಯಕಿಯ ಶಿಕ್ಷಣ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣ ಪ್ರಕಾಶ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸಿನ, ಬೆಂಗಳೂರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಬಿ ಎಲ್ ಸುಜಾತಾ ರಾಠೋಡ ಉಪಸ್ಥಿತರಿದ್ದರು.

ವಿಶೇಷ ಆಹ್ವಾನಿತರಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಜಂಟಿ ಕಾರ್ಯದರ್ಶಿ ವೆಂಕಟೇಶ ಮೂರ್ತಿ, ಬೆಂಗಳೂರು ಬಿಎಂಸಿಆರ್‌ಐ ಹಾಗೂ ಡೀನ್ ನಿರ್ದೇಶಕ ಡಾ.ರಮೇಶ್ ಕೃಷ್ಣ. ಕೆ ಅವರು ಆಗಮಿಸಿದ್ದರು.

Related Articles

Back to top button