Kannada NewsKarnataka NewsLatest

*ಒಂದು ವಾರ ಬೆಳಗಾವಿ ಸೇರಿದಂತೆ 7 ಜಿಲ್ಲೆಯಲ್ಲಿ ಭಾರಿ ಮಳೆ: ಆರೆಂಜ್ ಅಲರ್ಟ್​ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ 14 ಜಿಲ್ಲೆಗಳಲ್ಲಿ ಜುಲೈ 22 ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. 

Home add -Advt

ಶಿವಮೊಗ್ಗ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. 

ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಹಾವೇರಿ, ಗದಗ, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಕಾರವಾರ, ಮೂಡುಬಿದಿರೆ, ಯಲ್ಲಾಪುರ, ಪುತ್ತೂರು, ಖಾನಾಪುರ, ಭಾಗಮಂಡಲ, ಕಮ್ಮರಡಿ, ಹೊನ್ನಾವರ, ಬನವಾಸಿ, ಜೋಯ್ಡಾ, ಧರ್ಮಸ್ಥಳ, ಜಯಪುರ, ನಾಪೋಕ್ಲು, ಹಳಿಯಾಳ, ಬೆಳ್ತಂಗಡಿ, ಮುಂಡಗೋಡು, ನಿಪ್ಪಾಣಿ, ಕಿತ್ತೂರು, ಹುಂಚದಕಟ್ಟೆ, ಕೊಪ್ಪ, ಪೊನ್ನಂಪೇಟೆ, ಕಿರವತ್ತಿ, ಬೈಲಹೊಂಗಲ, ಧಾರವಾಡ, ಕಲಘಟಗಿ, ಶಿಗ್ಗಾಂವ್, ಸಂಕೇಶ್ವರ, ಧಾರವಾಡ, ಹುಬ್ಬಳ್ಳಿ, ಮುಲ್ಕಿ, ಕ್ಯಾಸಲ್​ರಾಕ್, ಶಕ್ತಿನಗರ, ಬಂಟವಾಳ, ಕದ್ರಾ, ಕುಂದಾಪುರ, ಕೋಟಾ, ಮಂಕಿ, ಶಿರಾಲಿ,ಆಗುಂಬೆ, ಅಂಕೋಲಾ, ಸುಳ್ಯ, ಗೋಕರ್ಣ, ಮಾಣಿ, ಸಿದ್ದಾಪುರ ಲೋಂಡಾದ, ಸೋಮವಾರಪೇಟೆ, ಕಳಸದಲ್ಲಿ ಈಗಾಗಲೆ ಮಳೆ ಮಳೆಯಾಗಿದ್ದು, ಮುಂದಿನ 48 ಗಂಟೆ ಮಳೆ ಆಗಲಿದೆ. 

Related Articles

Back to top button