
ಪ್ರಗತಿವಾಹಿನಿ ಸುದ್ದಿ: ಟೆಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಹೆಲಿಕಾಪ್ಟರ್ ರಾಡಾರ್ ಕಣ್ಗಾವಲಿನಿಂದ ನಾಪತ್ತೆಯಾಗಿ ಪತನವಾಗಿದ್ದು, ಇಬ್ಬರು ಸಚಿವರು ಸೇರಿ ಎಂಟು ಜನ ಸಾವನ್ನಪ್ಪಿದ್ದಾರೆ.
ಘಾನಾದ ಮಿಲಿಟರಿ ಹೆಲಿಕಾಪ್ಟರ್ ಪತನವಾಗಿ ಇಬ್ಬರು ಸಚಿವರು ಸೇರಿ ಎಂಟು ಜನ ಸಾವನ್ನಪ್ಪಿದ್ದು, ಮೃತರನ್ನು ರಕ್ಷಣಾ ಸಚಿವ ಎಡ್ವರ್ಡ್ ಒಮಾನೆ ಬೋಮಾ ಮತ್ತು ಪರಿಸರ ಸಚಿವ ಇಬ್ರಾಹಿಂ ಮುರ್ತಲಾ ಮುಹಮ್ಮದ್ ಎಂದು ಗುರುತಿಸಲಾಗಿದೆ.
Z- 9 ಯುಟಿಲಿಟಿ ಹೆಲಿಕಾಪ್ಟರ್ ಘಾನಾದ ರಾಜಧಾನಿ ಅಕ್ರಾದಿಂದ ಹೊರಟು ಪ್ರಮುಖ ಚಿನ್ನದ ಗಣಿಗಾರಿಕೆ ಕೇಂದ್ರವಾದ ಒಬುವಾಸಿಗೆ ಹೋಗುವ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ ಟೆಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಹೆಲಿಕಾಪ್ಟರ್ ರಾಡಾರ್ ಕಣ್ಗಾವಲಿನಿಂದ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ಹೆಲಿಕಾಪ್ಟರ್ ನಾಪತ್ತೆಯಾಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದಾಗ ಪತನವಾಗಿರುವುದು ಬೆಳಕಿಗೆ ಬಂದಿದೆ. ವಿಮಾನದಲ್ಲಿ ಒಟ್ಟು 8 ಮಂದಿ ಇದ್ದರು ಎಂದು ವರದಿಯಾಗಿದ್ದು, ಅಷ್ಟು ಜನ ಕೂಡ ಸಾವನ್ನಪ್ಪಿದ್ದಾರೆ ಇಂದು ಘಾನಾ ಸರ್ಕಾರ ದೃಢಪಡಿಸಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸಲಾಗಿದ್ದು, ಘಾನಾದ ಹಂಗಾಮಿ ಉಪ ರಾಷ್ಟ್ರೀಯ ಭದ್ರತಾ ಸಂಯೋಜಕ ಅಲ್ಲಾಜಿ ಮೊಹಮ್ಮದ್ ಮುನಿರು ಲಿಮುನಾ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕಾಂಗ್ರೆಸ್ ಉಪಾಧ್ಯಕ್ಷ ಸ್ಯಾಮ್ಯುಯಲ್ ಸರ್ಪಾಂಗ್ ಮತ್ತು ಮಾಜಿ ಸಂಸದೀಯ ಅಭ್ಯರ್ಥಿ ಸ್ಯಾಮ್ಯುಯೆಲ್ ಅಬೋಗೈ ಸೇರಿದ್ದಾರೆ.
ಹೆಲಿಕಾಪ್ಟರ್ನ ಸಿಬ್ಬಂದಿಯನ್ನು ಸ್ಮಾಡ್ರನ್ ನಾಯಕ ಪೀಟರ್ ಬಫೆಮಿ ಅನಲಾ, ಮಾಲಿನ್ ಟ್ಟುಮ್-ಅಂಪಡು ಮತ್ತು ಸಾರ್ಜೆಂಟ್ ಅರ್ನೆಸ್ಟ್ ಅಡೋ ಮೆನ್ಸಾ ಎಂಬುವವರು ಈ ವೊಂದು ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ.